Breaking NewsLatestರಾಜ್ಯಸುದ್ದಿ
ಅಫ್ಗಾನಿಸ್ತಾನ ಬಾಲಕಿಯರಿಗೆ ಪ್ರೌಢ ಶಿಕ್ಷಣ ಪಡೆಯಲು ಅನುಮತಿ ನೀಡಿದ ತಾಲಿಬಾನ್

ಇಸ್ಲಾಮಾಬಾದ್: ಅಘ್ಗಾನಿಸ್ತಾನದ ಬಾಲಕಿಯರು ಬುಧವಾರ ನಡೆಯಲಿರುವ ಪ್ರೌಢ ಶಿಕ್ಷಣದ ಪರೀಕ್ಷೆಗೆ ಹಾಜರಾಗಬಹುದು ಎಂದು ತಾಲಿಬಾನ್ ಸರ್ಕಾರ ಮಂಗಳವಾರ ತಿಳಿಸಿದೆ. ಕಳೆದ ವರ್ಷ ತಾಲಿಬಾನ್ ಬಂಡುಕೋರರು ದೇಶವನ್ನು ವಶಪಡಿಸಿಕೊಂಡ ನಂತರ ಬಾಲಕಿಯರು ತರಗತಿಗೆ ತೆರಳುವುದನ್ನು ನಿಷೇಧಿಸಲಾಗಿತ್ತು.
ಅಫ್ಗಾನಿಸ್ತಾನದ 34 ಪ್ರಾಂತ್ಯಗಳಲ್ಲಿ 31 ಪ್ರಾಂತ್ಯಗಳಿಗೆ ಈ ನಿರ್ಧಾರ ಅನ್ವಯವಾಗಲಿದೆ. ಬುಧವಾರ ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆವರೆಗೆ ಪರೀಕ್ಷೆ ನಡೆಯಲಿದೆ ಎಂದು ಕಾಬೂಲ್ ಶಿಕ್ಷಣ ಇಲಾಖೆಯ ಮುಖ್ಯಸ್ಥ ಎಹ್ಸಾನುಲ್ಲಾ ಕಿತಾಬ್ ಹೇಳಿದ್ದಾರೆ. ಆದರೆ ಪರೀಕ್ಷೆಗೆ ಎಷ್ಟು ಬಾಲಕಿಯರು ಹಾಜರಾಗುತ್ತಿದ್ದಾರೆ ಎಂಬ ಮಾಹಿತಿ ನೀಡಿಲ್ಲ.
