Breaking NewsLatestರಾಷ್ಟ್ರೀಯಸುದ್ದಿ

ಭಾರತಕ್ಕೆ ವಿಶ್ವ ನಾಯಕತ್ವ! ಎರಡು ಬಲಿಷ್ಠ ಗುಂಪುಗಳಿಗೆ ಭಾರತವೇ ಅಧ್ಯಕ್ಷ!

ಭಾರತಕ್ಕೆ 2022ರ ಡಿಸೆಂಬರ್‌ ತಿಂಗಳು ಅತ್ಯಂತ ಪ್ರಮುಖವಾಗಿದೆ. ಯಾಕಂದ್ರೆ ಒಂದೇ ಬಾರಿಗೆ ವಿಶ್ವದ ಎರಡು ಬಲಿಷ್ಠ ಗುಂಪಿನ ನಾಯಕತ್ವ ಭಾರತಕ್ಕೆ ದೊರೆತಿದೆ. ಸಧ್ಯಕ್ಕೆ ಭಾರತ, ಈಗಾಗಲೇ ಜಿ20 ದೇಶಗಳ ಅಧ್ಯಕ್ಷ ಸ್ಥಾನವನ್ನ ವಹಿಸಿಕೊಂಡಿದ್ದು, ಒಂದು ವರ್ಷ ಕಾಲ ಹಾಗೇ ಮುಂದುವರೆಯಲಿದೆ.

ಇದರ ಜೊತೆಗೆ ಈಗ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ನೇತೃತ್ವವನ್ನ ಕೂಡ ಭಾರತವೇ ವಹಿಸಿಕೊಂಡಿದೆ. ಡಿಸೆಂಬರ್‌ ತಿಂಗಳ ಅಧ್ಯಕ್ಷತೆ ಭಾರತಕ್ಕೆ ಸಿಕ್ಕಿದೆ. ಇನ್ನು ಅಧಿಕಾರ ಸ್ವೀಕರಿಸಿ ಬಳಿಕ ಮಾತನಾಡಿದ ವಿಶ್ವಸಂಸ್ಥೆಯಲ್ಲಿನ ಭಾರತದ ಪ್ರತಿನಿಧಿ ರುಚಿರಾ ಕಾಂಬೋಜ್‌, ʻಪ್ರಜಾಪ್ರಭುತ್ವಕ್ಕೋಸ್ಕರ ಏನು ಮಾಡಬೇಕು ಅಂತ ಭಾರತಕ್ಕೆ ಹೇಳಬೇಕಾಗಿಲ್ಲ, ಭಾರತ ನಿಮಗೆಲ್ಲಾ ತಿಳಿದಿರೋ ಹಾಗೆ ವಿಶ್ವದ ಅತ್ಯಂತ ಪುರಾತನ ನಾಗರಿಕತೆ. ಭಾರತದಲ್ಲಿ ಪ್ರಜಾಪ್ರಭುತ್ವದ ಬೇರುಗಳು 2500 ವರ್ಷಗಳ ಹಿಂದೆ ಇದ್ದವು. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ಪತ್ರಿಕಾಂಗಗಳು ದೇಶದಲ್ಲಿ ಉತ್ತಮವಾಗಿ ಕೆಲಸ ಮಾಡ್ತಿವೆ..ಭಾರತ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ.. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಈ ಕೂಡಲೇ ಸುಧಾರಣೆ ತರಬೇಕು. ಭಾರತ ವಿಶ್ವದಲ್ಲಿ ಉನ್ನತ ಸ್ಥಾನ ಪಡೆಯೋಕೆ ಸಿದ್ದವಾಗಿದೆ ಅಂತ ಭಾರತದ ಪರ ತಮ್ಮ ಹಕ್ಕು ಮಂಡಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button