Breaking NewsLatestರಾಷ್ಟ್ರೀಯಸುದ್ದಿ

ನಟ ಶಾರುಖ್ ಖಾನ್ ಮೆಕ್ಕಾಗೆ ಭೇಟಿ, ಫೋಟೋ ವೈರಲ್

ರಿಯಾದ್: ಡಂಕಿ ಸಿನಿಮಾದ ಚಿತ್ರೀಕರಣಕ್ಕಾಗಿ ಸೌದಿ ಅರೇಬಿಯಾಕ್ಕೆ ತೆರಳಿದ್ದ ನಟ ಶಾರುಖ್ ಖಾನ್, ಮೆಕ್ಕಾಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಇದೀಗ ಶಾರುಖ್ ಖಾನ್ ಮೆಕ್ಕಾಗೆ ಭೇಟಿ ನೀಡಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮುಖಕ್ಕೆ ಮಾಸ್ಕ್ ಧರಿಸಿ, ಬಿಳಿ ವಸ್ತ್ರ ತೊಟ್ಟುಕೊಂಡಿರುವ ಶಾರುಖ್ ಖಾನ್ ಉಮ್ರಾ(ಮೆಕ್ಕಾಕ್ಕೆ ತೆರಳುವ ತೀರ್ಥಯಾತ್ರೆ)ದಲ್ಲಿರುವುದು ಫೋಟೋದಲ್ಲಿ ಸೆರೆಯಾಗಿದೆ ಎಂದು ವರದಿ ವಿವರಿಸಿದೆ.

ಖಾನ್ ಸುತ್ತ ಜನರು ಸುತ್ತುವರಿದಿದ್ದು, ಮೆಕ್ಕಾ ಯಾತ್ರೆಯಲ್ಲಿರುವ ಶಾರುಖ್ ಫೋಟೋಗಳನ್ನು ಖಾನ್ ಫ್ಯಾನ್ ಕ್ಲಬ್ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಕೆಲವೇ ಹೊತ್ತಿನಲ್ಲಿ ಖಾನ್ ಅಭಿಮಾನಿಗಳು ಕಮೆಂಟ್ ಗಳ ಮಹಾಪೂರ ಹರಿಸಿದ್ದಾರೆ.

ಬುಧವಾರ ಶಾರುಖ್ ಖಾನ್ ತನ್ನ ಇನ್ಸ್ ಸ್ಟಾಗ್ರಾಮ್ ಖಾತೆಯಲ್ಲಿ ಸೌದಿಅರೇಬಿಯಾದಲ್ಲಿ ನಿಗದಿತ ಸಮಯಕ್ಕೆ ಸಿನಿಮಾ ಚಿತ್ರೀಕರಣ ಮುಕ್ತಾಯಗೊಂಡಿದೆ ಎಂದು ತಿಳಿಸಿದ್ದರು. ” ಸೌದಿಯಲ್ಲಿ ನಿಗದಿಯಂತೆ ಡಂಕಿ ಸಿನಿಮಾ ಚಿತ್ರೀಕರಣ ಪೂರ್ಣಗೊಂಡಿದೆ. ಈ ನಿಟ್ಟಿನಲ್ಲಿ ನಾನು ರಾಜು ಸರ್ ಗೆ ಧನ್ಯವಾದ ಹೇಳುತ್ತೇನೆ. ಸೌದಿಯ ಸಂಸ್ಕೃತಿ ಮತ್ತು ಸಿನಿಮಾ ಸಚಿವಾಲಯಕ್ಕೆ ವಿಶೇಷ ಧನ್ಯವಾದಗಳನ್ನು ಸಲ್ಲಿಸುವುದಾಗಿ ವಿಡಿಯೋದಲ್ಲಿ ಶಾರುಖ್ ಖಾನ್ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button