Breaking NewsLatestಜಿಲ್ಲಾ ಸುದ್ದಿಬೆಂಗಳೂರುರಾಜ್ಯಸುದ್ದಿ

ವಿಲ್ಸನ್ ಗಾರ್ಡನ್ ನಾಗ ಯಾರು ಅಂತ ನನಗೆ ಗೊತ್ತೇ ಇಲ್ಲ : ಸಚಿವ ಸೋಮಣ್ಣ

ಬೆಂಗಳೂರು: ವಿಲ್ಸನ್ ಗಾರ್ಡನ್ ನಾಗ ಯಾರು ಅಂತಾನೇ ನಮಗೆ ಗೊತ್ತಿಲ್ಲ. ನಾನು ಅವನನ್ನು ಭೇಟಿ ಆಗಿಲ್ಲ ಅಂತ ವಸತಿ ಸಚಿವ ಸೋಮಣ್ಣ ಸ್ಪಷ್ಟಪಡಿಸಿದ್ದಾರೆ.

ನಿನ್ನೆ ರಾತ್ರಿ ಸಚಿವ ಸೋಮಣ್ಣರನ್ನು ನಟೋರಿಯಸ್ ರೌಡಿ ವಿಲ್ಸನ್ ಗಾರ್ಡನ್ ನಾಗ ಭೇಟಿ ಮಾಡಿದ್ದ ಎಂಬ ಪ್ರಕರಣಕ್ಕೆ ಪ್ರತಿಕ್ರಿಯೆ ನೀಡಿದ ಸೋಮಣ್ಣ, ನನಗೆ ವಿಲ್ಸನ್ ಗಾರ್ಡನ್ ನಾಗ ಯಾರು ಅಂತ ಗೊತ್ತೇ ಇಲ್ಲ. ನಾನು ನಾಗನನ್ನು ಭೇಟಿಯಾಗಿಲ್ಲ. ಒಂದೇ ಒಂದೂ ನಿಮಿಷವೂ ನಾನು ಅವನನ್ನು ನೋಡಿಲ್ಲ. ನಿತ್ಯ ಸಾವಿರಾರು ಜನರು ನನ್ನ ಭೇಟಿಗೆ ಬರುತ್ತಾರೆ. ನಾಗ ಯಾರು, ತಿಮ್ಮ ಯಾರು ಬೊಮ್ಮಾ ಯಾರು ನನಗೆ ಗೊತ್ತಿಲ್ಲ ಎಂದರು.

ನನ್ನ ಜೀವನ ತೆರದ ಪುಸ್ತಕ. ನಾನು ಯಾವತ್ತು ಬೇರೆ ಕೆಲಸಗಳನ್ನು ಮಾಡಿಲ್ಲ. 55 ವರ್ಷಗಳಿಂದ ನಾನು ರಾಜಕೀಯ ಮಾಡ್ತಿದ್ದೇನೆ. 11 ಚುನಾವಣೆ ಎದುರಿಸಿದ್ದೇನೆ. ಯಾರು ಬರುತ್ತಾರೆ ಯಾರು ಹೋಗುತ್ತಾರೆ ನನಗೆ ಗೊತ್ತಿರಲ್ಲ. ಉತ್ತಮವಾಗಿ ಜೀವನ ಮಾಡಿಕೊಂಡು ಬಂದಿದ್ದೇನೆ. ನನ್ನ ವಯಸ್ಸಿಗೆ ಬೆಲೆ ಕೊಡಬೇಕು. ಹೀಗೆಲ್ಲ ಮಾಡಿದ್ರೆ ಮಾನಸಿಕವಾಗಿ ನನಗೆ ನೋವಾಗುತ್ತೆ. ಯಾವುದೇ ವ್ಯವಹಾರ ನನಗೆ ವಿಲ್ಸನ್ ಗಾರ್ಡನ್ ನಾಗನ ಜೊತೆ ಇಲ್ಲ. ನಾನು ಅವರನ್ನು ನೋಡಿಯೂ ಇಲ್ಲ. ಮಾತು ಆಡಿಸಿಲ್ಲ. ವಿಲ್ಸನ್ ಗಾರ್ಡನ್ ನಾಗ ಯಾರು ಅಂತಾನೂ ನನಗೆ ಗೊತ್ತಿಲ್ಲ ಅಂತ ಸ್ಪಷ್ಟಪಡಿಸಿದರು

Spread the love

Related Articles

Leave a Reply

Your email address will not be published. Required fields are marked *

Back to top button