Breaking NewsLatestವಿದೇಶಸುದ್ದಿ

ಇಂದು ಉಜ್ಜಯಿನಿಯಲ್ಲಿ ಭಾರತ್ ಜೋಡೋ ಯಾತ್ರೆ ನಡೆಸಲಿರುವ ರಾಹುಲ್ ಗಾಂಧಿ

ಭೋಪಾಲ್: ಮಹಾರಾಷ್ಟ್ರದ ಯಾತ್ರೆಯನ್ನು ಮುಕ್ತಾಯಗೊಳಿಸಿದ ಬಳಿಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ  ನೇತೃತ್ವದ ಭಾರತ್ ಜೋಡೋ ಯಾತ್ರೆ  ಬುಧವಾರ ಮಧ್ಯಪ್ರದೇಶ  ಪ್ರವೇಶಿಸಿದೆ.

ಆರು ದಿನಗಳ ಯಾತ್ರೆ ನಡೆಸಿದ ರಾಹುಲ್ ಗಾಂಧಿ ನೇತೃತ್ವದ ಯಾತ್ರೆಯು ಸೋಮವಾರ ಇಂದೋರ್‌ನಿಂದ ಉಜ್ಜಯಿನಿಗೆ ತಲುಪಿದೆ. ಭಾನುವಾರ ಮಧ್ಯಪ್ರದೇಶದಲ್ಲಿ ಭಾರತ್ ಜೋಡೋ ಯಾತ್ರೆ ವೇಳೆ ಬಾಲಕನೊಬ್ಬ ರಾಹುಲ್ ಗಾಂಧಿಗೆ ಹುಂಡಿಯಲ್ಲಿ ಕೂಡಿಟ್ಟಿದ್ದ ಹಣವನ್ನು ಯಾತ್ರೆಗೆ ಬಳಸುವಂತೆ ಅರ್ಪಿಸಿದ್ದಾನೆ. ಧನ್ಯವಾದ ಪತ್ರದಲ್ಲಿ ವಯನಾಡ್ ಸಂಸದರೂ ಆಗಿರುವ ರಾಹುಲ್ ಗಾಂಧಿ, ತ್ಯಾಗ ಮತ್ತು ನಿಸ್ವಾರ್ಥತೆಯು ಬಾಲ್ಯದಲ್ಲಿ ರೂಢಿಸಿಕೊಂಡ ಮೌಲ್ಯಗಳಾಗಿವೆ ಎಂದು ಬಾಲಕನನ್ನು ಬಣ್ಣಿಸಿದ್ದರು.

ಅಲ್ಲದೆ, ರಾಹುಲ್ ಗಾಂಧಿ ನೇತೃತ್ವದ ಇದೇ ಪಾದಯಾತ್ರೆಯಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆಗಳನ್ನು ಕೂಗಲಾಯಿತು ಎಂದು ಬಿಜೆಪಿ ಆರೋಪಿಸಿತ್ತು. ಘಟನೆಯನ್ನು ಗಮನಿಸಿದ ಪೊಲೀಸರು ಮಧ್ಯಪ್ರದೇಶ ಕಾಂಗ್ರೆಸ್ ಐಟಿ ವಿಭಾಗದ ಮುಖ್ಯಸ್ಥ ಅಭಯ್ ತಿವಾರಿ ಮತ್ತು ಪತ್ರಕರ್ತ ಪಿಯೂಷ್ ಬಾಬೆಲೆ ವಿರುದ್ಧ ಭಾನುವಾರ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ ಕಾಂಗ್ರೆಸ್​ನಿಂದ ಪ್ರತಿದೂರು ಕೂಡ ದಾಖಲಿಸಲಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button