Breaking NewsLatestವಿದೇಶಸುದ್ದಿ
ಏಶ್ಯಾದ ಸಿರಿವಂತರ ಪಟ್ಟಿಯಲ್ಲಿ ಬ್ರಿಟನ್ ಪ್ರಧಾನಿ ಸುನಾಕ್, ಮತ್ತವರ ಪತ್ನಿ ಅಕ್ಷತಾಗೆ ಸ್ಥಾನ

ಲಂಡನ್: ಬ್ರಿಟನ್‍ನ `2022ರ ಏಶ್ಯಾದ ಶ್ರೀಮಂತರ ಪಟ್ಟಿ’ಯಲ್ಲಿ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಮತ್ತವರ ಪತ್ನಿ ಅಕ್ಷತಾ ಮೂರ್ತಿ ಸ್ಥಾನಪಡೆದಿದ್ದಾರೆ.
ಹಿಂದುಜಾ ಕುಟುಂಬ 30.5 ಶತಕೋಟಿ ಪೌಂಡ್ ಸಂಪತ್ತಿನೊಂದಿಗೆ ಏಶ್ಯಾದ ಶ್ರೀಮಂತರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ಸುನಕ್ ಮತ್ತವರ ಪತ್ನಿ 790 ದಶಲಕ್ಷ ಪೌಂಡ್ ಸಂಪತ್ತಿನೊಂದಿಗೆ 17ನೇ ಸ್ಥಾನದಲ್ಲಿದ್ದಾರೆ.
ಈ ವರ್ಷದ ಏಶ್ಯಾ ಶ್ರೀಮಂತರ ಪಟ್ಟಿಯಲ್ಲಿ ಬ್ರಿಟನ್‍ನ 16 ಕೋಟ್ಯಾಧಿಪತಿಗಳು ಸ್ಥಾನ ಪಡೆದಿದ್ದಾರೆ. ಭಾರತದ ಪ್ರಕಾಶ್ ಲೋಹಿಯಾ, ಲಕ್ಷ್ಮೀ ಮಿತ್ತಲ್ ಮತ್ತವರ ಪುತ್ರ ಆದಿತ್ಯ, ನಿರ್ಮಲ್ ಸೇಥಿಯಾ ಅವರೂ ಈ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.
