ಹಳೇ ಗಾಯ ಕೆರೆದು ಫೀಲಾದ ರಮ್ಯಾ!

ಪೂರ್ಣ ವಿ-ರಾಮ
ಸದ್ಯ ಸಿನೆಮಾ ಮತ್ತು ಪಾಲಿಟಿಕ್ಸ್ ಎರಡರಿಂದಲೂ ಡಿಸ್ಟೆನ್ಸ್ ಕಾಯ್ದುಕೊಂಡಿರುವ ಮೋಹಕ ತಾರೆ ರಮ್ಯಾ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ!
ತಾವು ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣದ ಮುಖ್ಯಸ್ಥೆಯಾಗಿದ್ದಾಗ ನಡೆದ ಘಟನಾ ಪ್ರಮಾದವೊಂದನ್ನು ನೆನೆದು ರಾಹುಲ್ ಗಾಂಧಿ ಒಳ್ಳೆಯ ವ್ಯಕ್ತಿ ಎಂದಿದ್ದಾರೆ.
ಆಗ ಹಾಗಾಗಿತ್ತು ಎಂದ ರಮ್ಯಾ!
ರಾಹುಲ್ ಗಾಂಧಿ ಆಗ ಅಧ್ಯಕ್ಷರಾಗಿದ್ದರು. ಪಕ್ಷದ ವತಿಯಿಂದ ಸಂಸದರ ನಿಯೋಗವನ್ನು ಜರ್ಮನಿಗೆ ಕರೆದೊಯ್ಯಲಾಗಿತ್ತು. ತುಂಬು ಒತ್ತಡದ ಕೆಲಸವೂ ಅದಾಗಿತ್ತು. ಅಂಥ ಟೈಮಲ್ಲಿ ಬರ್ಲಿನ್ ನಲ್ಲಿರುವ ಮ್ಯೂಸಿಯಂ ಭೇಟಿಯ ವೇಳೆ ಅಲ್ಲಿನ ಸಂಸದರೂ ಜಾಯಿನ್ ಆಗಿದ್ದರು. ಅವರೆಲ್ಲಾ ರಾಹುಲ್ ಅವರ ಜೊತೆ ಮಾತನಾಡುತ್ತಿದ್ದ ಎಲ್ಲಾ ಭಾವ ಚಿತ್ರಗಳನ್ನು ಕ್ಲಿಕ್ಕಿಸಿ, ಭಾರತದ ನಮ್ಮ ತಂಡಕ್ಕೆ ಕಳಿಸಿಕೊಟ್ಟೆ. ಜೊತೆಗೆ-ರಾಹುಲ್ ಗಾಂಧಿಯವರ ಹಲವು ಮುಖಗಳು ಎಂಬ ಶೀರ್ಶಿಕೆ ಕೂಡ ಕಳಿಸಿದೆ. ಅದಾಗಿದ್ದೇ ಆಗಿದ್ದು ಅದು ದೊಡ್ಡ ಮಟ್ಟದಲ್ಲಿ ಟ್ರೋಲ್ ಆಯಿತು. ನಾನು ಮಾಡಿದ ಸಣ್ಣ ತಪ್ಪಿನಿಂದ ದೊಡ್ಡ ಪ್ರಮಾದವೇ ಆಯಿತು. ನಾನು ಆಗ ರಾಜಿನಾಮೆ ನೀಡಲು ಮುಂದಾಗಿಬಿಟ್ಟೆ. ಅಂಥ ಹೊತ್ತಲ್ಲಿ ನಯವಾಗಿ ಪ್ರತಿಕ್ರಿಯೆ ನೀಡಿದ ರಾಹುಲ್ ಜೀ, ಮುಂದಿನ ಸಲ ಹೀಗೆ ತಪ್ಪು ಆಗದಂತೇ ನೋಡಿಕೊಳ್ಳಿ ಎಂದು ನಸು ನಕ್ಕಿದ್ದರು. ಅವರು ಒಳ್ಳೇ ಮನುಷ್ಯ ನಿಜವಾಗಿಯೂ ಎಂದು ಹಳೇ ಮೆಮೊರಿಗೆ ಹೊಸ ಟಚ್ ಕೊಟ್ಟಿದ್ದಾರೆ ಊರಿಗೊಬ್ಳೆ ಪದ್ಮಾವತಿ ಖ್ಯಾತಿಯ ರೂಪವತಿ ರಮ್ಯಾ!




