Breaking NewsLatestರಾಷ್ಟ್ರೀಯಸುದ್ದಿ
ಮೋದಿ ಸಂಘದ ಸ್ವಯಂತ ಸೇವಕ, ಆದ್ರೆ ಅವರನ್ನ ನಿಯಂತ್ರಿಸೋಕೆ ಆಗಲ್ಲ: RSS ಮುಖ್ಯಸ್ಥ!

ಮೋದಿ ಆರೆಸ್ಸೆಸ್ನ ಸ್ವಯಂ ಸೇವಕ ಆಗಿದ್ರೂ ಕೂಡ ಅವರು ಸ್ವತಂತ್ರವಾಗಿ ಕೆಲಸ ಮಾಡ್ತಾರೆ ಅಂತ (ಸರಸಂಘಚಾಲಕ) ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಜಬಲ್ಪುರ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಸಂಘದ ಹೆಸರು ಬಂದಾಗಲೆಲ್ಲಾ ನೀವು ಮೋದಿಜಿಯವರ ಹೆಸರನ್ನು ತಗೋತಿರಿ.
ಹೌದು, ಮೋದಿ ಜಿ ಸಂಘದ ಸ್ವಯಂಸೇವಕ ಮತ್ತು ಪ್ರಚಾರಕ. VHP ಕೂಡ ನಮ್ಮ ಸ್ವಯಂ ಸೇವಕರಿಂದ ನಡೆಯುತ್ತೆ. ಆದರೆ, ಅವರು ಸ್ವತಂತ್ರವಾಗಿ ಕೆಲಸ ಮಾಡುತ್ತಾರೆ. ನಾವು ಸಮಾಲೋಚನೆ ಮಾಡ್ಬೋದು, ಸಲಹೆ ಕೊಡಬೋದು. ಆದರೆ, ಅವರನ್ನ ನಿಯಂತ್ರಣ ಮಾಡೋಕೆ ಯಾವತ್ತಿಗೂ ಸಾಧ್ಯವಿಲ್ಲ ಅಂತ ಹೇಳಿದ್ದಾರೆ.
