Breaking NewsLatestಜಿಲ್ಲಾ ಸುದ್ದಿಬೆಂಗಳೂರು
ನಾನು ಮತ್ತು ರವಿಚಂದ್ರನ್ ಓದಿದ್ದು ಒಂದೇ ಶಾಲೆಯಲ್ಲಿ’; ‘ರೇಮೊ’ ವೇದಿಕೆಯಲ್ಲಿ ಡಿಕೆಶಿ ಮಾತು

ಚಿತ್ರರಂಗದ ಜೊತೆ ತಮಗೆ ಇದ್ದ ಹಳೇ ಒಡನಾಟವನ್ನು ಡಿಕೆ ಶಿವಕುಮಾರ್ ಮೆಲುಕು ಹಾಕಿದರು. ರವಿಚಂದ್ರನ್ ಜೊತೆಗಿನ ಸ್ನೇಹದ ಬಗ್ಗೆಯೂ ಅವರು ಮಾತನಾಡಿದರು.
ನವೆಂಬರ್ 25ರಂದು ‘ರೇಮೊ’ ಸಿನಿಮಾ ಬಿಡುಗಡೆ ಆಗಲಿದೆ. ಭಾನುವಾರ (ನ.20) ಈ ಚಿತ್ರದ ಪ್ರೀ ರಿಲೀಸ್ ಇವೆಂಟ್ ಅದ್ದೂರಿಯಾಗಿ ನಡೆದಿದೆ. ಈ ಕಾರ್ಯಕ್ರಮಕ್ಕೆ ಡಿಕೆ ಶಿವಕುಮಾರ್, ಕ್ರೇಜಿ ಸ್ಟಾರ್ ರವಿಚಂದ್ರನ್ ಮುಂತಾದವರು ಅತಿಥಿಗಳಾಗಿ ಆಗಮಿಸಿದ್ದರು. ಈ ವೇದಿಕೆಯಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ‘ನಾನು ಮತ್ತು ರವಿಚಂದ್ರನ್ ಬಾಲ್ಯದ ಗೆಳೆಯರು. ನಾವಿಬ್ಬರು ಓದಿದ್ದು ಒಂದೇ ಶಾಲೆಯಲ್ಲಿ’ ಎಂದು ಹೇಳಿದರು. ಚಿತ್ರರಂಗದ ಜೊತೆ ತಮಗೆ ಇದ್ದ ಹಳೇ ಒಡನಾಟವನ್ನು ಅವರು ಮೆಲುಕು ಹಾಕಿದರು. ಕನ್ನಡ ಚಿತ್ರರಂಗದ ಇಂದಿನ ಏಳಿಗೆಯನ್ನು ಡಿಕೆಶಿ ಕೊಂಡಾಡಿದರು.
