Breaking NewsLatestರಾಷ್ಟ್ರೀಯಸುದ್ದಿ

ರಾಹುಲ್‌ರನ್ನು ತಬ್ಬಿದ ಆದಿತ್ಯ ಠಾಕ್ರೆಗೆ ಗೋಮೂತ್ರ ಸ್ನಾನ ಮಾಡಿಸಬೇಕು: ಬಿಜೆಪಿ

ಮುಂಬೈ: ಭಾರತ್‌ ಜೋಡೋ ಯಾತ್ರೆಯಲ್ಲಿ ಭಾಗವಹಿಸಿ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರನ್ನು ತಬ್ಬಿಕೊಂಡ ಆದಿತ್ಯ ಠಾಕ್ರೆ ಅವರನ್ನು ಗೋಮೂತ್ರದಿಂದ ‌ಶುದ್ಧೀಕರಣ ಮಾಡಬೇಕು ಎಂದು ಮಹಾರಾಷ್ಟ್ರದ ಆಡಳಿತರೂಢ ಬಿಜೆಪಿ ಹಾಗೂ ಬಾಳಾಸಾಹೇಬಾಂಚಿ ಶಿವಸೇನಾ‌ ಆಗ್ರಹಿಸಿದೆ.

‘ಸಾರ್ವಕರ್‌ ಬ್ರಿಟೀಷರೊಂದಿಗೆ ಕ್ಷಮಾಪಣೆ ಕೇಳುವ ಮೂಲಕ ಸ್ವಾತಂತ್ರ್ಯ ಹೋರಾಟಗಾರರಿಗೆ ಅವಮಾನ ಮಾಡಿದ್ದರು’ ಎಂದು ರಾಹುಲ್‌ ಗಾಂಧಿ ಹೇಳಿದ ಬೆನ್ನಲ್ಲೇ ಆಡಳಿತರೂಢ ಪಕ್ಷಗಳಿಂದ ಈ ಹೇಳಿಕೆ ಹೊರಬಿದ್ದಿದೆ.

‘ಸ್ವಾತಂತ್ರ್ಯವೀರ ವಿನಾಯಕ ದಾಮೋದರ ಸಾವರ್ಕರ್‌ ಅವರನ್ನು ಟೀಕೆ ಮಾಡಿದ ರಾಹುಲ್‌ ಗಾಂಧಿಯನ್ನು, ಆದಿತ್ಯ ಠಾಕ್ರೆ ಆಲಿಂಗಿಸಿದ್ದಾರೆ. ಹೀಗಾಗಿ ಅವರಗೆ ಗೋಮೂತ್ರ ಸಿಂಪಡಸಬೇಕು. ಅಥವಾ ಪೂರ್ಣ ಪ್ರಮಾಣದ ಗೋಮೂತ್ರ ಸ್ನಾನ ಮಾಡಿಸಬೇಕು’ ಎಂದು ವಾಗ್ದಾಳಿ ನಡೆಸಿದ್ದಾರೆ.

‘ವೀರ ಸಾವರ್ಕರ್ ಅವರನ್ನು ನಿಂದಿಸುವವರೊಂದಿಗೆ ತಾನು ಹೋಗುತ್ತಿದ್ದೇನೆ ಎಂದು ಆದಿತ್ಯ ಅವರಿಗೆ ತಿಳಿದಿರಲಿಲ್ಲವೇ? ಇದು ಬಾಳಾಸಾಹೇಬ್‌ ಠಾಕ್ರೆ ಅವರ ಹಿಂದುತ್ವದ ಸಿದ್ಧಾಂತದ ಸೋಲು. ಆದಿತ್ಯಗೆ ಬಾಳಾಸಾಹೇಬರ ಆಶೀರ್ವಾದ ಸಿಗುವುದಿಲ್ಲ’ ಎಂದು ಬಿಜೆಪಿಯ ಕೇಂದ್ರ ಸಚಿವ ರಾವ್‌ಸಾಹೇಬ್‌ ದಾವ್ನೆ ಹೇಳಿದ್ದಾರೆ.

ರಾಹುಲ್‌ ಗಾಂಧಿಯ ಭಾರತ್‌ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಆದಿತ್ಯ ಅವರನ್ನು ಗೋಮೂತ್ರ ಹಾಕಿ ತಿಕ್ಕಿ ಶುದ್ದೀಕರಣ ಮಾಡಬೇಕು ಎಂದು ಬಾಳಾಸಾಹೇಬಾಂಚಿ ಶಿವಸೇನೆಯ ದೀಪಕರ್‌ ಕೇಸರ್‌ಕರ್‌ ಹೇಳಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button