Breaking NewsLatestವಿದೇಶಸುದ್ದಿ

ಪ್ರಧಾನಿ ಮೋದಿಯವರನ್ನು ರಿಷಿ ಸುನಕ್ ಭೇಟಿ ಮಾಡಿದ ಕೆಲವೇ ಹೊತ್ತಿನಲ್ಲಿ ಭಾರತೀಯ ಯುವ ವೃತ್ತಿಪರರಿಗೆ 3 ಸಾವಿರ ಯುಕೆ ವೀಸಾ ಘೋಷಿಸಿದ ಬ್ರಿಟನ್

ಲಂಡನ್: ಬ್ರಿಟನ್ ನೂತನ ಪ್ರಧಾನಿ ರಿಷಿ ಸುನಕ್ ಅವರು ಪ್ರತಿ ವರ್ಷ ಭಾರತದ ಯುವ ವೃತ್ತಿಪರರಿಗೆ 3 ಸಾವಿರ ಬ್ರಿಟನ್ ವೀಸಾ ನೀಡಲು ಒಪ್ಪಿಗೆ ನೀಡಿದ್ದಾರೆ. ಬ್ರಿಟನ್ ಸರ್ಕಾರದ ಈ ವೀಸಾ ಯೋಜನೆಯಿಂದ ಪ್ರಯೋಜನ ಪಡೆಯುವ ಮೊದಲ ರಾಷ್ಟ್ರ ಭಾರತ ಎಂದು ಬ್ರಿಟಿಷ್ ಸರ್ಕಾರ ಹೇಳಿದೆ, ಕಳೆದ ವರ್ಷ ಎರಡೂ ದೇಶಗಳು ಒಪ್ಪಂದ ಮಾಡಿಕೊಂಡ ಇಂಗ್ಲೆಂಡ್- ಭಾರತ ವಲಸೆ ಮತ್ತು ಪ್ರಯಾಣ ಪಾಲುದಾರಿಕೆಯ ಬಲವನ್ನು ಎತ್ತಿ ತೋರಿಸುತ್ತದೆ.

18ರಿಂದ 30 ವರ್ಷದೊಳಗಿನ ಭಾರತೀಯ ಪದವೀಧರ ಯುವಕರಿಗೆ ಎರಡು ವರ್ಷಗಳ ವೃತ್ತಿಪರ ಇಂಗ್ಲೆಂಡ್-ಭಾರತ ವೃತ್ತಿಪರ ಯೋಜನೆ ವೀಸಾವನ್ನು ವರ್ಷಕ್ಕೆ 3 ಸಾವಿರ ಯುವಕರಿಗೆ ನೀಡಲಾಗುವುದು ಎಂದು ಇಂಗ್ಲೆಂಡ್ ಪ್ರಧಾನ ಮಂತ್ರಿ ಕಚೇರಿ ತಿಳಿಸಿದೆ. ಈ ವೀಸಾ ಪರಸ್ಪರ ಸಹಮತವಾಗಿದ್ದು ಇಂಗ್ಲೆಂಡಿನಿಂದ ಭಾರತಕ್ಕೆ ಬರುವ ಯುವ ವೃತ್ತಿಪರರಿಗೂ ವರ್ಷಕ್ಕೆ 3 ಸಾವಿರ ವೀಸಾವನ್ನು ಭಾರತ ಒದಗಿಸಲಿದೆ. ಇಂಡೋನೇಷ್ಯಾದ ಬಾಲಿಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯ 17 ನೇ ಆವೃತ್ತಿಯ ಬದಿಯಲ್ಲಿ ರಿಷಿ ಸುನಕ್ ಅವರು ನಿನ್ನೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಕೆಲವೇ ಗಂಟೆಗಳಲ್ಲಿ ಇಂಗ್ಲೆಂಡ್ ಸರ್ಕಾರ ಈ ಪ್ರಕಟಣೆ ಹೊರಡಿಸಿದೆ.

ರಿಷಿ ಸುನಕ್ ಅವರು ಪ್ರಧಾನಿಯಾದ ಬಳಿಕ ಮೋದಿಯವರ ಜೊತೆ ನಡೆಸಿದ ಮೊದಲ ಮಾತುಕತೆಯಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button