Breaking NewsLatestಜಿಲ್ಲಾ ಸುದ್ದಿರಾಜ್ಯಸುದ್ದಿ

ಸಚಿವ ಸುಧಾಕರ್​ ಹೇಳಿಕೆಯಲ್ಲಿ ಸಿಕ್ಕ ಸುಳಿವು; ಇನ್ನಷ್ಟು ದೊಡ್ಡದಾಗಲಿದೆಯಾ ಬಿಜೆಪಿ?

ದೇವನಹಳ್ಳಿ: ಏರ್ಪೋರ್ಟ್​ನಲ್ಲಿ ನಿರ್ಮಾಣವಾಗಿರುವ ಕೆಂಪೇಗೌಡರ ಪ್ರತಿಮೆ ವೀಕ್ಷಣೆಗೆ ಆಗಮಿಸಿದ ಸಚಿವ ಡಾ.ಕೆ.ಸುಧಾಕರ್, ಬಿಜೆಪಿಗೆ ಮತ್ತಷ್ಟು ಜನ ಶಾಸಕರು ಬಂದು ಸೇರಲಿದ್ದಾರೆ ಎಂಬ ಸುಳಿವು ನೀಡಿದ್ದಾರೆ.

ಈ ಹಿಂದೆ, ‘ಬಿಜೆಪಿ ಸೇರಿದ್ದ 18 ಜನರು ಸಂಪರ್ಕದಲ್ಲಿದ್ದಾರೆ’ ಎಂದು ಕಾಂಗ್ರೆಸ್ ಹೇಳಿಕೆ ನೀಡಿತ್ತು.

ಅದಕ್ಕೆ ಪ್ರತಿಕ್ರಿಯಿಸಿದ ಸಚಿವರು ‘ಲೋಕಾರೂಢಿಯಾಗಿ ಕಾಂಗ್ರೆಸ್ ಅವರು ಹೇಳಿದ್ದಾರೆ. ಇವೆಲ್ಲ ರಾಜಕಾರಣದ ಹೇಳಿಕೆಗಳು ಗಂಭೀರವಾಗಿ ತೆಗೆದುಕೊಳ್ಳಬಾರದು’ ಎಂದು ಹೇಳಿದರು.

‘ಜೆಡಿಎಸ್ ಮತ್ತು ಕಾಂಗ್ರೆಸ್​ನಿಂದ ಬಂದ 18 ಜನರ ಜೊತೆಗೆ ಮತ್ತಷ್ಟು ಸಂಖ್ಯೆ ಹೆಚ್ಚಾಗುತ್ತೆ ಹೊರತು ಕಡಿಮೆಯಾಗಲ್ಲ. ಮುಂದಿನ ದಿನಗಳಲ್ಲಿ ಮತ್ತಷ್ಟು ಜನ ನಮ್ಮ‌ ಪಕ್ಷಕ್ಕೆ ಬರಲಿದ್ದಾರೆ. ಈಗಾಗಲೆ ಇಬ್ಬರು ಮಾಜಿ ಎಂಪಿ, ಹಿರಿಯ ಐಎಎಸ್ ಅಧಿಕಾರಿ, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿನ ಮಾಜಿ ಶಾಸಕರು ಬಂದಿದ್ದಾರೆ. ನೋಡ್ತಿರಿ ಇನ್ನೂ ಯಾರೆಲ್ಲ ಬರ್ತಾರೆ ಅಂತ’ ಎಂದು ಮುಂದಿನ ದಿನಗಳಲ್ಲಿ ಮತ್ತಷ್ಟು ಶಾಸಕರು ಬಿಜೆಪಿಗೆ ಬರುವುದಾಗಿ‌ ಪರೋಕ್ಷವಾಗಿ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button