Breaking NewsLatestವಿದೇಶಸುದ್ದಿ

ಉ.ಕೊರಿಯಾದ 80 ಯುದ್ಧವಿಮಾನ ಹಿಮ್ಮೆಟ್ಟಿಸಿದ ದ.ಕೊರಿಯಾ: ಮತ್ತೊಂದು ಯುದ್ಧ ಭೀತಿ!

ಗಡಿಯಲ್ಲಿ ಸುಮಾರು 180 ಯುದ್ಧವಿಮಾನಗಳು 4 ಗಂಟೆಗಳ ಕಾಲ ಹಾರಾಟ ನಡೆಸಿದ್ದರಿಂದ ಉತ್ತರ ಕೊರಿಯಾದ 80 ಯುದ್ಧ ವಿಮಾನವನ್ನು ದಕ್ಷಿಣ ಕೊರಿಯಾ ಹಿಮ್ಮೆಟ್ಟಿಸಿದೆ.

ಉಕ್ರೇನ್ ಮೇಲೆ ರಷ್ಯಾ ಯುದ್ಧ ನಡೆಸುತ್ತಿರುವುದರಿಂದ ಜಾಗತಿಕ ಮಟ್ಟದಲ್ಲಿ ಆರ್ಥಿಕ ಹಿನ್ನಡೆ ಉಂಟಾಗಿರುವ ಬೆನ್ನಲ್ಲೇ ಮತ್ತೆರಡು ದೇಶಗಳ ನಡುವೆ ಯುದ್ಧದ ಕಾರ್ಮೊಡ ಆವರಿಸಿದ್ದು, ಜಗತ್ತು ಈ ಬೆಳವಣಿಗೆಯನ್ನು ಕಳವಳದಿಂದ ನೋಡುವಂತಾಗಿದೆ.

ಇತ್ತೀಚೆಗಷ್ಟೇ ಉತ್ತರ ಕೊರಿಯಾ 20 ಕ್ಷಿಪಣಿಗಳನ್ನು ಒಂದೇ ಬಾರಿ ಪರೀಕ್ಷೆಗೊಳಪಡಿಸಿ ಆತಂಕ ಸೃಷ್ಟಿಸಿತ್ತು. ಇದರ ಬೆನ್ನಲ್ಲೇ ಮತ್ತೆ ಮೂರು ಕ್ಷಿಪಣಿಗಳನ್ನು ಹಾರಾಸಿತ್ತು. ಒಂದು ಕ್ಷಿಪಣಿ ದಕ್ಷಿಣ ಕೊರಿಯಾದ ಸಮುದ್ರ ವ್ಯಾಪ್ತಿಯಲ್ಲಿ ಬಿದ್ದಿತ್ತು.

ಈ ಬೆಳವಣಿಗೆ ನಡುವೆ ಉತ್ತರ ಕೊರಿಯಾದ 180 ಯುದ್ಧ ವಿಮಾನಗಳು ದಕ್ಷಿಣ ಕೊರಿಯಾ ಗಡಿಯಲ್ಲಿ ಹಾರಾಟ ನಡೆಸಿದ್ದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ದಕ್ಷಿಣ ಕೊರಿಯಾ ಪ್ರತಿದಾಳಿ ನಡೆಸಿದ್ದು, 80 ವಿಮಾನವನ್ನು ಹಿಮ್ಮೆಟ್ಟಿಸಿದ್ದಾಗಿ ಹೇಳಿಕೊಂಡಿದೆ.

ಉತ್ತರ ಕೊರಿಯಾದ ವಿಮಾನಗಳು ದಕ್ಷಿಣ ಕೊರಿಯಾದ ಗಡಿಯಲ್ಲಿ ಸುಮಾರು 12 ಕಿ.ಮೀ. ವ್ಯಾಪ್ತಿಯಲ್ಲಿ ಹಾರಾಟ ನಡೆಸಿವೆ ಎಂದು ಹೇಳಲಾಗಿದೆ.ಇದರಿಂದ ದಕ್ಷಿಣ ಕೊರಿಯಾ ದಾಳಿ ನಡೆಸಿ 80 ಯುದ್ಧ ವಿಮಾನಗಳನ್ನು ಹೊಡೆದುರಳಿಸಿದ್ದು, ಇದರಲ್ಲಿ ಎಫ್-35 ಎ ವಿಮಾನವನ್ನು ಹಿಮ್ಮೆಟ್ಟಿಸಿವೆ ಎಂದು ಸೇನೆ ಹೇಳಿಕೊಂಡಿದೆ.

Spread the love

Related Articles

Leave a Reply

Your email address will not be published. Required fields are marked *

Back to top button