
ನವದೆಹಲಿ: ಅಣುಬಾಂಬನ್ನು ತಯಾರಿಸಲು ಯೂಕ್ರೇನ್ ಈಗ ಪಾಕಿಸ್ತಾನದ ಸಹಾಯ ಕೇಳಲು ನಿಯೋಗವನ್ನು ಕಳಿಸಿದೆ. ಯೂಕ್ರೇನ್ ಈ ನಡೆಯಿಂದಾಗಿ ಅಣು ಯುದ್ಧದ ಭಯ ಎಲ್ಲೆಡೆ ಹರಡುತ್ತಿದೆ.
ರಷ್ಯಾದ ಸೆನೆಟರ್ ಇಗೋರ್ ಮೊರೊಝೊವ್ ‘ಯೂಕ್ರೇನಿನ ತಂತ್ರಜ್ಞರು ಪಾಕಿಸ್ತಾನಕ್ಕೆ ತೆರಳಿ ಅಣು ಬಾಂಬಿನ ತಂತ್ರಜ್ಞಾನವನ್ನು ತರಲಿದ್ದಾರೆ’ ಎಂದು ಆರೋಪಿಸಿದ್ದಾರೆ.
‘ಡರ್ಟಿ ಬಾಂಬ್ ಮಾಡುವ ಸಾಮರ್ಥ್ಯ ಯೂಕ್ರೇನ್ಗೆ ಇದೆ ಎನ್ನುವುದು ಎಲ್ಲರಿಗೂ ತಿಳಿದಿದೆ. ಆದರೆ ಅವರಲ್ಲಿ ಹಣದ ಕೊರತೆ ಇದೆ. ಡರ್ಟಿ ಬಾಂಬ್ ಮೂಲಕ ಯೂಕ್ರೇನ್, ರಷ್ಯಾವನ್ನು ಪ್ರಚೋದಿಸುತ್ತಿದೆ’ ಎಂದು ಇಗೋರ್ ಆರೋಪಿಸಿದ್ದಾರೆ.
