Breaking NewsLatestಜಿಲ್ಲಾ ಸುದ್ದಿಮೈಸೂರುರಾಜ್ಯಸುದ್ದಿ
ಈ ಬಾರಿ ಮೈಸೂರು ದಸರಾಕ್ಕೆ ಖರ್ಚಾಗಿದ್ದೆಷ್ಟು?

ಮೈಸೂರು: ಕರೊನಾದಿಂದ ಕಳೆದ 2 ವರ್ಷಗಳಿಂದ ಸರಳವಾಗಿ ಆಚರಿಸಿದ್ದ ಮೈಸೂರು ದಸರಾವನ್ನು ಈ ವರ್ಷ ವಿಜೃಂಭಣೆಯಿಂದ ಆಚರಿಸಲಾಗಿದೆ.
ಮೈಸೂರು ದಸಾರದ ಖರ್ಚು ವೆಚ್ಚದ ವಿವರವನ್ನು ಇಂದು (ನ.1) ಮೈಸೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ನೀಡಿದರು. ದಸರಾ ಉತ್ಸವ ಆಚರಣೆಗೆ ಒಟ್ಟು 31ಕೋಟಿ 8 ಲಕ್ಷ ಹಣ ಬಿಡುಗಡೆಯಾಗಿದ್ದು, ಅದರಲ್ಲಿ 28 ಕೋಟಿ 74 ಲಕ್ಷ ರೂಪಾಯಿ ವೆಚ್ಚವಾಗಿದೆ. ಒಟ್ಟು 2 ಕೋಟಿ 34 ಲಕ್ಷ ಉಳಿತಾಯವಾಗಿದೆ ಎಂದು ತಿಳಿಸಿದರು.
ಮಂಡ್ಯ, ಚಾಮರಾಜ ನಗರ, ಹಾಸನ ಜಿಲ್ಲೆಗೆ ಬಿಡುಗಡೆಯಾದ ಅನುದಾನ ಕೂಡ ಇದರಲ್ಲಿ ಸೇರಿದೆ. ಮೈಸೂರಿನ ರಾಜಮನೆತನಕ್ಕೆ 47 ಲಕ್ಷ ರು. ಗೌರವಧನ ನೀಡಲಾಗಿದೆ. ಟಿಕೆಟ್ ಹಾಗೂ ಗೋಲ್ಡ್ ಕಾರ್ಡ್ ಮಾರಾಟದಿಂದ 76 ಲಕ್ಷ ರೂಪಾಯಿ ಹಣ ಸಂಗ್ರಹವಾಗಿದೆ. ಯುವದಸರಾ ಹಾಗೂ ಯುವ ಸಂಭ್ರಮಕ್ಕೆ 6 ಕೋಟಿ ರೂಪಾಯಿ ವೆಚ್ಚವಾಗಿದೆ ಎಂದು ವಿವರ ನೀಡಿದರು.
