Breaking NewsLatestರಾಷ್ಟ್ರೀಯಸುದ್ದಿ

ರಾಹುಲ್ ಗಾಂಧಿಯನ್ನು ಸಾಯಿಬಾಬಾಗೆ ಹೋಲಿಸಿದ ರಾಬರ್ಟ್ ವಾದ್ರ

ರಾಹುಲ್ ಗಾಂಧಿಯನ್ನು ಉದ್ಯಮಿ ರಾಬರ್ಟ್ ವಾದ್ರ ಸಾಯಿಬಾಬಗೆ ಹೋಲಿಕೆ ಮಾಡಿದ್ದು, ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯಿಂದ ದೇಶ ಬದಲಾವಣೆಯನ್ನು ಕಾಣಲಿದೆ ಎಂದು ಹೇಳಿದ್ದಾರೆ. ರಾಹುಲ್ ಗಾಂಧಿಯನ್ನು ಉದ್ಯಮಿ ರಾಬರ್ಟ್ ವಾದ್ರ ಸಾಯಿಬಾಬಗೆ ಹೋಲಿಕೆ ಮಾಡಿದ್ದು, ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯಿಂದ ದೇಶ ಬದಲಾವಣೆಯನ್ನು ಕಾಣಲಿದೆ ಎಂದು ಹೇಳಿದ್ದಾರೆ.

ಭಾರತ್ ಜೋಡೊ ಯಾತ್ರೆಯೊಂದಿಗೆ ಸಹಸ್ರಾರು ಸಂಖ್ಯೆಯಲ್ಲಿ ಜನತೆ ತಮ್ಮನ್ನು ಜೋಡಿಸಿಕೊಂಡಿದ್ದು, ರಾಹುಲ್ ಗಾಂಧಿಯನ್ನು ಭವಿಷ್ಯದ ಭರವಸೆ ಎಂಬಂತೆ ನೋಡುತ್ತಿದ್ದಾರೆ ಎಂದು ವಾಧ್ರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಹಾರಾಷ್ಟ್ರದ ಅಹ್ಮದ್ ನಗರದಲ್ಲಿರುವ ಶಿರಡಿ ಟೌನ್ ನ ಗೆ ಭೇಟಿ ನೀಡಿರುವ ವಾದ್ರ, ಶಿರಡಿ ಸಾಯಿಬಾಬ ದೇವಾಲಯಕ್ಕೆ ಭೇಟಿ ನೀಡಿದ್ದು, ರಾಹುಲ್ ಗಾಂಧಿ ಸಹ ಸಾಯಿಬಾಬಾ ಮಾದರಿಯಲೇ ಏಕತೆಯನ್ನು ಪ್ರಚಾರ ಮಾಡುತ್ತಿದ್ದಾರೆ ಸಾಯಿಬಾಬಾ ಅವರಂತೆಯೇ ಯೋಚಿಸುತ್ತಿದ್ದಾರೆ ಎಂದು ವಾದ್ರ ಹೇಳಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button