Breaking NewsLatestರಾಷ್ಟ್ರೀಯವಿದೇಶಸುದ್ದಿ

ರಿಷಿ ಸುನಕ್ ಪತ್ನಿ ಅಕ್ಷತಾ ಮೂರ್ತಿ ಇನ್ಫೋಸಿಸ್​ನಿಂದ ಪಡೆಯುವ ಡಿವಿಡೆಂಡ್ ಎಷ್ಟು?

ನವದೆಹಲಿ: ಬ್ರಿಟನ್​ನ ನೂತನ ಪ್ರಧಾನಿ ರಿಷಿ ಸುನಕ್  ಪತ್ನಿ ಅಕ್ಷತಾ ಮೂರ್ತಿ  ಶ್ರೀಮಂತ ಹಿನ್ನೆಲೆ ಹೊಂದಿರುವವರು.

ಇವರ ತಂದೆ ನಾರಾಯಣ ಮೂರ್ತಿ ಇನ್ಫೋಸಿಸ್​  ಸಹ ಸಂಸ್ಥಾಪಕರು. ಅಕ್ಷತಾ ಕೂಡ ಕಂಪನಿಯಲ್ಲಿ ಷೇರು ಹೊಂದಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಅಕ್ಷತಾ ಅವರು 2022ರಲ್ಲಿ ಇನ್ಫೋಸಿಸ್​ನಿಂದ 126.61 ಕೋಟಿ ರೂ. ಡಿವಿಡೆಂಡ್ ಅಥವಾ ಲಾಭಾಂಶ ಪಡೆದಿರುವ ಬಗ್ಗೆ ಇತ್ತೀಚೆಗೆ ವರದಿಯಾಗಿತ್ತು. ಇದೀಗ 23ನೇ ಹಣಕಾಸು ವರ್ಷದಲ್ಲಿ ಅವರು ಎಷ್ಟು ಮಧ್ಯಂತರ ಲಾಭಾಂಶ ಪಡೆಯಲಿದ್ದಾರೆ ಎಂಬುದೂ ತಿಳಿದುಬಂದಿದೆ.

ಸೆಪ್ಟೆಂಬರ್​ 30ರ ಲೆಕ್ಕಾಚಾರದ ಪ್ರಕಾರ ಅಕ್ಷತಾ ಅವರು ಇನ್ಫೋಸಿಸ್​ನಲ್ಲಿ ಶೇಕಡಾ 0.93ರಷ್ಟು, ಅಂದರೆ 3,89,57,096 ಷೇರುಗಳನ್ನು ಹೊಂದಿದ್ದಾರೆ. ಈ ಮಾಹಿತಿ ಕಂಪನಿಯು ಸೆಪ್ಟೆಂಬರ್​ನಲ್ಲಿ ಷೇರು ಮಾರುಕಟ್ಟೆಗೆ ಸಲ್ಲಿಸಿದ ದಾಖಲೆಗಳಿಂದ ತಿಳಿದುಬಂದಿದೆ. 82.81ರ ರೂಪಾಯಿ ವಿನಿಮಯ ಮೌಲ್ಯದ ಲೆಕ್ಕಾಚಾರ ಪ್ರಕಾರ ಅಕ್ಷತಾ ಹೊಂದಿರುವ ಷೇರುಗಳ ಮೌಲ್ಯ 717 ದಶಲಕ್ಷ ರೂ. (5,944 ಕೋಟಿ ರೂ.) ಆಗುತ್ತದೆ.

ಬ್ರಿಟಿಷ್ ದೊರೆ ಮೂರನೇ ಕಿಂಗ್ ಚಾರ್ಲ್ಸ್ ಆಸ್ತಿ ಮೌಲ್ಯವೂ ಇದಕ್ಕಿಂತ ಕಡಿಮೆ, ಅಂದರೆ 500ರಿಂದ 600 ದಶಲಕ್ಷ ರೂ. ಎಂದು ಭಾವಿಸಲಾಗಿದೆ.

23ನೇ ಹಣಕಾಸು ವರ್ಷಕ್ಕೆ ಇನ್ಫೋಸಿಸ್ ಪ್ರತಿ ಷೇರಿಗೆ 16.50ರ ಮಧ್ಯಂತರ ಡಿವಿಡೆಂಡ್ ಘೋಷಿಸಿದೆ. ಅಕ್ಟೋಬರ್ 27ರಂದು ಕಂಪನಿ ಈ ಘೋಷಣೆ ಮಾಡಿದೆ. ಇದರಂತೆ, ಅಕ್ಷತಾ ಮೂರ್ತಿ 64.27 ಕೋಟಿ ರೂ. ಪಡೆಯಲು ಅರ್ಹರಾಗಿರುತ್ತಾರೆ.

Spread the love

Related Articles

Leave a Reply

Your email address will not be published. Required fields are marked *

Back to top button