Breaking NewsLatestರಾಷ್ಟ್ರೀಯಸುದ್ದಿ
ಆತ್ಮಾಹುತಿ ಬಾಂಬ್ ದಾಳಿ ಬಗ್ಗೆ ಅಣ್ಣಾಮಲೈ ‘ಸ್ಪೋಟಕ’ ಮಾಹಿತಿ

ತಮಿಳುನಾಡಿನ ಕೊಯಮತ್ತೂರು ಸಿಲಿಂಡರ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಬಿಜೆಪಿ ಘಟಕದ ಅಧ್ಯಕ್ಷ ಕೆ. ಅಣ್ಣಾಮಲೈ ಪ್ರತಿಕ್ರಿಯೆ ನೀಡಿ, ಇದೊಂದು ಆತ್ಮಹತ್ಯೆ ಬಾಂಬ್ ದಾಳಿ ಮಾದರಿ ಶಂಕೆ ಇದೆ. ಈ ಸಂಬಂಧ ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆಯಲಾಗಿದೆ ಹೇಳಿದ್ದಾರೆ.
ಪ್ರಕರಣದ ಹಿಂದೆ ಐಸಿಸ್ ಸಂಘಟನೆಯ ಕೈವಾಡ ಇರುವ ಶಂಕೆ ಇದೆ. ಕೊಯಮುತ್ತೂರು ಸಿಲಿಂಡರ್ ಸ್ಪೋಟ ಒಂದು ಆತ್ಮಹತ್ಯೆ ಮಾದರಿಯಲ್ಲಿದೆ ಎಂದು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಸ್ಪೋಟದ ವೇಳೆ ಜಮೇಶ್ ಮೊಬಿನ್ ಮೃತಪಟ್ಟಿದ್ದಾನೆ. ಮೃತನ ಮನೆಯಲ್ಲಿ ಸ್ಪೋಟಕ ವಸ್ತುಗಳು ಪತ್ತೆಯಾಗಿವೆ. 50 ಕೆಜಿ ಅಮೋನಿಯಂ ನೈಟ್ರೇಟ್, ಪೊಟಾಷಿಯಂ, ಸೋಡಿಯಂ ಫ್ಯೂಸ್ ವೈರ್, ಸೇರಿದಂತೆ ವಿವಿಧ ಸ್ಪೋಟಕ ವಸ್ತುಗಳು ಪತ್ತೆಯಾಗಿವೆ. ಆದರೆ, ಪತ್ತೆ ಮಾಹಿತಿಯನ್ನು ಪೊಲೀಸರು ಬಹಿರಂಗಪಡಿಸಿಲ್ಲ ಎಂದು ಅಣ್ಣಾಮಲೈ ಆರೋಪಿಸಿದ್ದಾರೆ.
