Breaking NewsLatestಜಿಲ್ಲಾ ಸುದ್ದಿಬೆಂಗಳೂರುರಾಷ್ಟ್ರೀಯಸುದ್ದಿ
ಗುಜರಾತ್ ಮುಖ್ಯಮಂತ್ರಿಯನ್ನು ಕಾರಿಗೆ ಹತ್ತಿಸಿಕೊಳ್ಳದೆ ಅವಮಾನ

ಬೆಂಗಳೂರು: ಗುಜರಾತ್ ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ಅಲ್ಲಿನ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರನ್ನು ಕಾರಿಗೆ ಹತ್ತಲು ಬಿಡದೆ ಸ್ವಲ್ಪ ದೂರ ನಡೆಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಅವಮಾನ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಇದಕ್ಕೆ ಸಂಬಂಧಿಸಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಜನರಿಗೆ ಕೈ ಬೀಸಿ ಕಾರನ್ನು ಏರಲು ಭೂಪೇಂದ್ರ ಪಟೇಲ್ ಪ್ರಯತ್ನಿಸಿದ್ದಾರೆ. ಈ ಸಂದರ್ಭ ಸಿಬ್ಬಂದಿ ಕಾರಿನ ಡೋರ್ ತೆಗೆದು ಪಟೇಲ್ ಅವರನ್ನು ಹತ್ತಿಸಲು ಮುಂದಾಗಿದ್ದಾರೆ.
ಆದರೆ ಕಾರನ್ನು ನಿಲ್ಲಿಸದೆ ಮುಂದಕ್ಕೆ ಕೊಂಡೊಯ್ಯಲಾಗಿದೆ. ಚಲಿಸುವ ಕಾರಿನ ಜೊತೆಗೆ ಪಟೇಲ್ ಅವರು ಸ್ವಲ್ಪ ದೂರ ವೇಗವಾಗಿ ನಡೆದು ಹೋಗುತ್ತಿರುವುದು ವಿಡಿಯೊದಲ್ಲಿದೆ.
‘ಗುಜರಾತ್ ಮುಖ್ಯಮಂತ್ರಿ ಹೆಸರು ನೆನಪಾಗುತ್ತಿಲ್ಲವೇ? ಗೂಗಲ್ ಮಾಡಿ ನೋಡಿ. ಗೂಗಲ್ ಸಿಎಂ ಹೆಸರನ್ನು ಹೇಳುತ್ತದೆ. ಅವರೇ ಈ ವಿಡಿಯೊದಲ್ಲಿ ಕಾರಿನೊಳಗೆ ಕೂರಲು ಪ್ರಯತ್ನಿಸುತ್ತಿರುವುದು. ಗಾಡಿ ಯಾರದ್ದು? ನಿಮಗೆ ತಿಳಿದಿದೆಯೇ?’ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.
