Breaking NewsLatestರಾಷ್ಟ್ರೀಯಸುದ್ದಿ

ಮೋದಿ, ಶಾ ಸೇರಿ ಬಿಜೆಪಿಯಿಂದ ಕೊಹ್ಲಿಗೆ ಶ್ಲಾಘನೆಯ ಸುರಿಮಳೆ

ನವದೆಹಲಿ: ಪಾಕಿಸ್ತಾನ ವಿರುದ್ಧದ ಗೆಲುವಿಗಾಗಿ ಟೀಂ ಇಂಡಿಯಾವನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.

ವಿಶೇಷವಾಗಿ ಪ್ರಧಾನಿ ಮೋದಿ ತಮ್ಮ ಟ್ವೀಟ್‌ನಲ್ಲಿ ವಿರಾಟ್ ಕೊಹ್ಲಿಯ ಅದ್ಭುತ ಇನ್ನಿಂಗ್ಸ್‌ ಬಗ್ಗೆ ಕೊಂಡಾಡಿದ್ದಾರೆ. ವಿರಾಟ್ ಅಮೋಘ ಪ್ರದರ್ಶನ ನೀಡಿದ್ದಾರೆ ಎಂದು ಹೊಗಳಿದ್ದಾರೆ.

ಪಾಕಿಸ್ತಾನ ವಿರುದ್ಧ ಭಾರತ ತಂಡ ಗೆಲುವಿನ ನಂತರ ಪ್ರಧಾನಿ ಮೋದಿ ಟ್ವೀಟ್​ ಮಾಡಿದ್ದಾರೆ. ‘ಟೀಮ್ ಇಂಡಿಯಾಕ್ಕೆ ಅದ್ಭುತ ಗೆಲುವು! ಇಂದಿನ ಶ್ರೇಷ್ಠ ಪ್ರದರ್ಶನಕ್ಕಾಗಿ ಭಾರತ ತಂಡಕ್ಕೆ ಅಭಿನಂದನೆಗಳು. ವಿರಾಟ್ ಕೊಹ್ಲಿ ತಮ್ಮ ಅಮೋಘ ಇನ್ನಿಂಗ್ಸ್‌ನಲ್ಲಿ ಗಮನಾರ್ಹ ದೃಢತೆಯನ್ನು ಪ್ರದರ್ಶಿಸಿದರು. ಮುಂದಿನ ಆಟಗಳಿಗೆ ಶುಭಾಶಯಗಳು ಎಂದು ವಿಶೇಷವಾಗಿ ವಿರಾಟ್​ ಕೊಹ್ಲಿಗೆ ಟ್ಯಾಗ್​ ಮಾಡುವ ಮೂಲಕ ಪ್ರಧಾನಿ ಮೋದಿ ಟ್ವೀಟ್​ ಮಾಡಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿ, ಟಿ20 ವಿಶ್ವಕಪ್ ಆರಂಭಿಸಲು ಪರಿಪೂರ್ಣ ಮಾರ್ಗ. ದೀಪಾವಳಿ ಆರಂಭ. ಎಂತಹ ಅದ್ಭುತ ಇನ್ನಿಂಗ್ಸ್ ವಿರಾಟ್​ ಕೊಹ್ಲಿ. ಇಡೀ ತಂಡಕ್ಕೆ ಅಭಿನಂದನೆಗಳು ಎಂದು ಬರೆದಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button