Breaking NewsLatestಜಿಲ್ಲಾ ಸುದ್ದಿಬೆಂಗಳೂರುರಾಜ್ಯರಾಷ್ಟ್ರೀಯಸುದ್ದಿ

ರಾಜ್ಯದ ಪ್ರತಿ ಜಿಲ್ಲೆಯಲ್ಲೂ ‘ಅಪ್ಪು ಆಯಂಬುಲೆನ್ಸ್ ಸೇವೆ’ ಆರಂಭ : ಪ್ರಕಾಶ್ ರಾಜ್

ಬೆಂಗಳೂರು: ಮೈಸೂರಿನಲ್ಲಿ ಈಗಾಗಲೇ ಮೊದಲ ಅಪ್ಪು ಆಯಂಬುಲೆನ್ಸ್ ಸೇವೆ ಆರಂಭಗೊಂಡಿದೆ. ರಾಜ್ಯದ ಪ್ರತಿಯೊಂದು ಜಿಲ್ಲೆಗಳಲ್ಲಿ ಅಪ್ಪು ಆಯಂಬುಲೆನ್ಸ್ ಸೇವೆ ಆರಂಭಗೊಳ್ಳಬೇಕು. ನನ್ನ ಕನಸಿನ ಯೋಜನೆಗೆ, ಅಪ್ಪು ಆಸೆಗೆ ಹಲವರು ಕೈ ಜೋಡಿಸಿದ್ದಾರೆ.

ಮುಂದೆ ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿ ಅಪ್ಪು ಆಯಂಬುಲೆನ್ಸ್ ಸೇವೆಯನ್ನು ಆರಂಭಿಸೋದಕ್ಕೆ ನಿರ್ಧರಿಸಲಾಗಿದೆ ಎಂಬುದಾಗಿ ನಟ ಪ್ರಕಾಶ್ ರಾಜ್ ಘೋಷಣೆ ಮಾಡಿದರು.

ಪುನೀತ ಪರ್ವ ಕಾರ್ಯಕ್ರಮದಲ್ಲಿ ಭಾಗವಹಿಸಿ, ಅರಮನೆ ಮೈದಾನದಲ್ಲಿ ಮಾತನಾಡಿದಂತ ಅವರು, ಪುನೀತ್ ರಾಜ್ ಕುಮಾರ್ ಇಲ್ಲ ಎನ್ನುವುದನ್ನು ನಾನು ಒಪ್ಪುವುದಿಲ್ಲ. ಅಪ್ಪು ಇಂದು ಇಲ್ಲಿದ್ದರೇ ಕಾಂತಾರ ಎಂದು ಹೇಳುತ್ತಿದ್ದರು. ಕನ್ನಡದಲ್ಲಿ ಹೊಸ ನಟರು ಬಂದಿದ್ದರೇ ಅಪ್ಪು ಸ್ವಾಗತಿಸುತ್ತಿದ್ದರು ಎಂದು ಹೇಳಿದರು.

ಅಪ್ಪು ಆಯಂಬುಲೆನ್ಸ್ ಸೇವೆ ಆರಂಭಿಸಬೇಕು. ಪುನೀತ್ ರಾಜ್ ಕುಮಾರ್ ಕನಸು ಕೂಡ ಇದಾಗಿತ್ತು. ಈ ಮೂಲಕ ರಾಜ್ಯದ ಪ್ರತಿಯೊಬ್ಬರಿಗೂ ಆಯಂಬುಲೆನ್ಸ್ ಸೇವೆ ಸಿಗಬೇಕು ಅಂತ ಹೇಳುತ್ತಿದ್ದರು. ಈ ಮಾತು ಅವರ ನಿಧನಾನಂತ್ರ ಹೇಳಿದಾಗ ನಟ ಸೂರ್ಯ, ನಟ ಚಿರಂಜೀವಿ ಹಾಗೂ ಶಿವರಾಜ್ ಕುಮಾರ್ ಪತ್ನಿ ಗೀತಾ ಒಂದೊಂದು ಆಯಂಬುಲೆನ್ಸ್ ಕೊಟ್ಟಿದ್ದಾರೆ. ಮುಂದೆ ರಾಜ್ಯಾಧ್ಯಂತ ಈ ಆಯಂಬುಲೆನ್ಸ್ ಸೇವೆ ಆರಂಭಗೊಳ್ಳಲಿದ್ದಾವೆ ಎಂದರು.

Spread the love

Related Articles

Leave a Reply

Your email address will not be published. Required fields are marked *

Back to top button