ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಇಂದಿನಿಂದ ಎರಡು ದಿನಗಳ ಕಾಲ ಉತ್ತರಾಖಂಡ ಪ್ರವಾಸದಲ್ಲಿದ್ದಾರೆ. ಇವರು ಮೊತ್ತ ಮೊದಲು ಭಾರಿ ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
ಬಾಬಾ ಕೇದಾರನಾಥದ ಪುಣ್ಯಭೂಮಿಯನ್ನು ತಲುಪಿದ ಪ್ರಧಾನಿ ಮೋದಿ ಅವರು ಹಿಮಾಚಲ ಪ್ರದೇಶದ ಸ್ಥಳೀಯ ವಿಶೇಷ ಉಡುಗೆಯನ್ನು ಧರಿಸಿ ಕೇದಾರನಾಥನ ದರ್ಶನಕ್ಕೆ ಹೋಗಿರುವುದು ತುಂಬಾ ವಿಶೇಷವಾಗಿತ್ತು.
ಪ್ರಧಾನಮಂತ್ರಿ ನರೇಂದ್ರ ಮೋದಿ ಕೇದಾರನಾಥ ಪ್ರವಾಸದಲ್ಲಿ ಧರಿಸಿರುವ ಉಡುಪನ್ನು ಚೋಳ ಡೋರಾ ಎಂದು ಕರೆಯಲಾಗುತ್ತದೆ. ಇದನ್ನು ಹಿಮಾಚಲ ಪ್ರದೇಶದ ಕೈಮಗ್ಗ ಉದ್ಯಮದಲ್ಲಿ ತಯಾರಿಸಲಾಗಿದೆ. ಪ್ರಧಾನಿ ಮೋದಿ ಹಿಮಾಚಲದ ಚಂಬಾ ಪ್ರವಾಸಕ್ಕೆ ಹೋದಾಗ ಮಹಿಳೆಯೊಬ್ಬರು ತಮ್ಮ ಕೈಯಿಂದ ಈ ಉಡುಪನ್ನು ಉಡುಗೊರೆಯಾಗಿ ನೀಡಿದ್ದಾರೆ.
ಮಹಿಳೆಗೆ ನೀಡಿದ ಭರವಸೆಯನ್ನು ಈಡೇರಿಸಿದ ಪಿಎಂ ಮೋದಿ
ಚಂಬಾ ಪ್ರವಾಸದ ವೇಳೆ ಉಡುಪನ್ನು ತೆಗೆದುಕೊಂಡ ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳೆಗೆ ಚಳಿ ಪ್ರದೇಶಕ್ಕೆ ಹೋದಾಗಲೆಲ್ಲಾ ಅದನ್ನು ಧರಿಸುವುದಾಗಿ ಭರವಸೆ ನೀಡಿದ್ದರು. ಕೇದಾರನಾಥ ದೇಗುಲವನ್ನು ತಲುಪಿದ ನಂತರ, ಪ್ರಧಾನಿ ಮೋದಿ ತಮ್ಮ ಭರವಸೆಯನ್ನು ಈಡೇರಿಸಿದರು ಮತ್ತು ಇಂದು ಪ್ರಧಾನಿ ಅದೇ ಉಡುಗೆಯನ್ನು ಧರಿಸಿ ಆಗಮಿಸಿದರು. ಈ ಉಡುಪನ್ನು ಉತ್ತಮ ಕರಕುಶಲತೆಯಿಂದ ತಯಾರಿಸಲಾಗಿದೆ.
