Breaking NewsLatestಜಿಲ್ಲಾ ಸುದ್ದಿರಾಷ್ಟ್ರೀಯವಿದೇಶಸುದ್ದಿ
ಬೂದು ಪಟ್ಟಿಯಿಂದ ಪಾಕಿಸ್ಥಾನ ಹೊರಕ್ಕೆ

ಇಸ್ಲಾಮಾಬಾದ್: ಫೈನಾನ್ಶಿಯಲ್ ಆಯಕ್ಷನ್ ಟಾಸ್ಕ್ ಫೋರ್ಸ್ (ಎಫ್‌ಎಟಿಎಫ್)ನ ಬೂದು ಪಟ್ಟಿಯಲ್ಲಿರುವ ಪಾಕಿಸ್ಥಾನ ಇದೇ ವಾರ ಆ ಪಟ್ಟಿಯಿಂದ ಹೊರಗೆ ಬರುವ ಸಾಧ್ಯತೆಯಿದೆ.
ಎಫ್‌ಎಟಿಎಫ್ ನೀಡಿರುವಂತಹ ಕೆಲಸಗಳನ್ನು ಪಾಕ್ ಉತ್ತಮವಾಗಿ ಮಾಡಿದೆ.
ಈ ಬಗ್ಗೆ ಅ.20, 21ರಂದು ಸಿಂಗಾಪುರ ನೇತೃತ್ವದಲ್ಲಿ ನಡೆವ ಎಫ್‌ಎಟಿಎಫ್ ಸಭೆಯಲ್ಲಿ ಈ ಬಗ್ಗೆ ನಿರ್ಧಾರವಾಗಲಿದೆ.
ಅಕ್ರಮ ಹಣ ವರ್ಗಾವಣೆ ತಪ್ಪಿಸಲು ಹಾಗೂ ಉಗ್ರರಿಗೆ ಹಣದ ಹರಿವು ತಪ್ಪಿಸುವಲ್ಲಿ ಕಾನೂನು, ಆರ್ಥಿಕ, ತನಿಖೆ, ಸರಕಾರೇತರ ಸೇರಿ ಹಲವು ವಲಯಗಳಲ್ಲಿ ನ್ಯೂನ್ಯತೆಗಳನ್ನು ಗಮನಿಸಿ ಎಫ್‌ಎಟಿಎಫ್ ಪಾಕಿಸ್ಥಾನವನ್ನು 2018ರಲ್ಲಿ ಬೂದು ಪಟ್ಟಿಗೆ ಸೇರಿಸಿತ್ತು.
