Breaking NewsLatestರಾಷ್ಟ್ರೀಯಸುದ್ದಿ

ಡಿಎಂಕೆ ಪಕ್ಷದ ಅಧ್ಯಕ್ಷರಾಗಿ 2ನೇ ಬಾರಿ ಎಂಕೆ ಸ್ಟಾಲಿನ್ ಆಯ್ಕೆ

ಚೆನ್ನೈ: ದ್ರಾವಿಡ ಮುನ್ನೇಟ್ರ ಕಳಗಂ ಅಧ್ಯಕ್ಷರಾಗಿ ಎಂಕೆ ಸ್ಟಾಲಿನ್ ಅವರು ಎರಡನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಭಾನುವಾರ ನಡೆದ ಪಕ್ಷದ ಸಾಮಾನ್ಯ ಮಂಡಳಿ ಸಭೆಯಲ್ಲಿ ತಮಿಳುನಾಡು ಮುಖ್ಯಮಂತ್ರಿಯನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. 69 ವರ್ಷದ ಸ್ಟಾಲಿನ್ ಅವರನ್ನು ಅಧ್ಯಕ್ಷರಾಗಿ ಘೋಷಣೆ ಮಾಡಿದ ನಂತರ ಅವರು ಪಕ್ಷದ ಸದಸ್ಯರಿಗೆ ಶುಭಾಶಯ ಕೋರಿದ್ದು, ಅವರಿಗೆ ಪಕ್ಷದ ಸದಸ್ಯರಿಂದ ಅದ್ದೂರಿ ಸ್ವಾಗತ ದೊರೆಯಿತು ಎಂದು ಎಎನ್‌ಐ ವರದಿ ಮಾಡಿದೆ.

ಡಿಎಂಕೆ ನಾಯಕರಾದ ದುರೈ ಮುರುಗನ್ ಮತ್ತು ಟಿ.ಆರ್.ಬಾಲು ಪಕ್ಷದ ಪ್ರಧಾನ ಕಾರ್ಯದರ್ಶಿ ಮತ್ತು ಖಜಾಂಚಿಯಾಗಿ ಆಯ್ಕೆಯಾಗಿದ್ದಾರೆ. ಡಿಎಂಕೆಯಲ್ಲಿ ಅಗ್ರ ಮೂರು ಸ್ಥಾನಗಳನ್ನು ಹೊಂದಿರುವ ಮೂವರು ನಾಯಕರು ತಮ್ಮ ನಾಮನಿರ್ದೇಶನ ಪತ್ರವನ್ನು ಪಕ್ಷದ ಸಂಘಟನಾ ಕಾರ್ಯದರ್ಶಿ ಆರ್‌ಎಸ್ ಭಾರತಿ ಅವರಿಗೆ ಚೆನ್ನೈನಲ್ಲಿರುವ ಪಕ್ಷದ ಪ್ರಧಾನ ಕಚೇರಿಯಲ್ಲಿ ಸಲ್ಲಿಸಿದ್ದರು.

ನಾಮಪತ್ರ ಸಲ್ಲಿಸುವ ಮುನ್ನ ಸ್ಟಾಲಿನ್ ಅವರು ಡಿಎಂಕೆ ಸಂಸ್ಥಾಪಕ ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಸಿಎನ್ ಅಣ್ಣಾದೊರೈ ಮತ್ತು ತಮ್ಮ ತಂದೆ ಎಂ ಕರುಣಾನಿಧಿ ಅವರ ಸ್ಮಾರಕಗಳಿಗೆ ಭೇಟಿ ನೀಡಿದ್ದರು.

Spread the love

Related Articles

Leave a Reply

Your email address will not be published. Required fields are marked *

Back to top button