Breaking NewsLatestಕೊಡಗುಜಿಲ್ಲಾ ಸುದ್ದಿರಾಜ್ಯಸುದ್ದಿ

ನಿರುದ್ಯೋಗದ ಭೀತಿಯಲ್ಲಿರುವ ಅರಣ್ಯ ಪದವೀಧರ ವಿದ್ಯಾರ್ಥಿಗಳು

ಕೊಡಗು: ನೇಮಕಾತಿಗೆ ಸಂಬಂಧಿಸಿದಂತೆ ಬದಲಾಗಿರುವ ಸರಕಾರದ ನೀತಿಯಿಂದ ದಾರಿ ತೋರದಂತಾಗಿರುವ ಅರಣ್ಯ ಪದವೀಧರ ವಿದ್ಯಾರ್ಥಿಗಳ ಪ್ರಶ್ನೆ ಇದು. ರಾಜ್ಯದಲ್ಲಿ ಕೇವಲ 2 ಅರಣ್ಯ ಕಾಲೇಜುಗಳಿದ್ದು, ಪ್ರತಿ ವರ್ಷ ಹೊರಬರುವ 160 ಪದವೀಧರರು ನಿರುದ್ಯೋಗದ ಭೀತಿಯಲ್ಲಿದ್ದಾರೆ.
ಅರಣ್ಯ ರಕ್ಷಿಸದಿದ್ದರೆ ಅಪಾಯ ತಪ್ಪಿದ್ದಲ್ಲ
ಬಿಎಸ್‌ಸಿ ಕೃಷಿ, ರೇಷ್ಮೆ, ಬಿವಿಎಸ್‌ಸಿ, ಹೈನುಗಾರಿಕೆ, ಮೀನುಗಾರಿಕೆ ಸೇರಿದಂತೆ ವೃತ್ತಿಪರ ಪದವಿ ಪಡೆದುಕೊಳ್ಳುವವರಿಗೆ ಸಂಬಂಧಪಟ್ಟ ಆಯಾ ಇಲಾಖೆಗಳಲ್ಲೇ ಉದ್ಯೋಗದಲ್ಲಿ ಶೇ. 100ರಷ್ಟು ಮೀಸಲಿದೆ. ಆದರೆ, ಅರಣ್ಯ ಪದವೀಧರರಿಗೆ ಈ ಸೌಲಭ್ಯ ಇಲ್ಲ. ಉಳಿದ ವೃತ್ತಿಪರ ಪದವೀಧರರಿಗೆ ಅನ್ವಯಿಸುವ ಮಾನದಂಡವನ್ನೇ ಅರಣ್ಯ ಪದವೀಧರರಿಗೂ ಅನ್ವಯಿಸುವಂತೆ ಒತ್ತಾಯಿಸಿ 1990ರಿಂದಲೇ ಹೋರಾಟ ನಡೆಯುತ್ತಿದೆ. ಆದರೆ ಪ್ರಯೋಜನ ಆಗಿಲ್ಲ.

ವಲಯ ಅರಣ್ಯಾಧಿಕಾರಿಗಳ ನೇಮಕ ಸಂದರ್ಭದಲ್ಲಿ ಶೇ. 75ರಷ್ಟು ಹುದ್ದೆಗಳು ಅರಣ್ಯ ಪದವೀಧರರಿಗೆ ಮೀಸಲಿಟ್ಟು 2012ರಲ್ಲಿ ಸರಕಾರ ಆದೇಶ ಹೊರಡಿಸಿತ್ತು. ಇದರಿಂದಾಗಿ ಅರಣ್ಯ ಪದವೀಧರರು ಸ್ವಲ್ಪ ನಿಟ್ಟುಸಿರು ಬಿಟ್ಟಿದ್ದರು. ಆದರೆ, ಇದೀಗ ಅರಣ್ಯ ಪದವೀಧರರಿಗೆ ಮೀಸಲಾಗಿದ್ದ ಹುದ್ದೆಯಲ್ಲಿ ಶೇ. 25ರಷ್ಟು ಕಡಿತ ಮಾಡಿ ಶೇ. 50ಕ್ಕೆ ಇಳಿಸಿ ಸರಕಾರ ಆದೇಶ ಮಾಡಿರುವುದು ಅರಣ್ಯ ಪದವಿ ವಿದ್ಯಾರ್ಥಿಗಳಲ್ಲಿ ಆತಂಕವನ್ನುಂಟು ಮಾಡಿದೆ.

Spread the love

Related Articles

Leave a Reply

Your email address will not be published. Required fields are marked *

Back to top button