Breaking NewsLatestರಾಜ್ಯರಾಷ್ಟ್ರೀಯಸುದ್ದಿ

ಅಕ್ಷಯ್ ತೃತೀಯದಂದು ಚಿನ್ನದ ಬೆಲೆ ಎಷ್ಟು ಗೊತ್ತಾ?

ಬೆಂಗಳೂರು : ಚಿನ್ನಾಭರಣ ಪ್ರಿಯರ ಪಾಲಿಗೆ ಬಹುಮಹತ್ವದ ದಿನವಾದ ಅಕ್ಷಯ ತೃತೀಯ (Akshaya Tritiya) ಇಂದು ಬಂದಿದೆ. ಯಾವುದೇ ಶುಭ ಕಾರ್ಯ ಕೈಗೊಳ್ಳುವುದಾದರೆ ಹಿಂದೂ ಪಂಚಾಂಗದ ಪ್ರಕಾರ ಅಕ್ಷಯ ತೃತೀಯವನ್ನು ಬಹಳ ಒಳ್ಳೆಯ ದಿನವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ ವಿಶೇಷವಾಗಿ ಚಿನ್ನ ಖರೀದಿ, ವಾಹನ ಖರೀದಿ, ಹೊಸ ಮನೆ ಸೇರಿದಂತೆ ಇನ್ನಿತರ ಶುಭಕಾರ್ಯಗಳಿಗೆ ಅಕ್ಷಯ ತೃತೀಯದಂದೇ ಮುಂದಡಿ ಇಡಲಾಗುತ್ತದೆ. ಇದೇ ಕಾರಣಕ್ಕೆ ಅಕ್ಷಯ ತೃತೀಯದ ದಿನ ಚಿನ್ನದ ಅಂಗಡಿಗಳಳು ಗ್ರಾಹಕರಿಂದಲೇ ತುಂಬಿ ತುಳುಕುತ್ತಿರುತ್ತವೆ. ಹೀಗಾಗಿ ಗ್ರಾಹಕರಿಗಾಗಿ ಇಂದಿನ ಚಿನ್ನದ ಬೆಲೆ ಇಲ್ಲಿ ಕೊಡಲಾಗಿದೆ.

ಇಂದು ಮೇ 3 ಮಂಗಳವಾರ ಬೆಳಗಿನ ವೇಳೆಗೆ ದೇಶದಲ್ಲಿ 1 ಗ್ರಾಂ (24 ಕ್ಯಾರಟ್‌) ಬಂಗಾರದ ಬೆಲೆ ₹5,151 ರೂ. ದಾಖಲಾಗಿದೆ. ಬೆಂಗಳೂರಿನಲ್ಲಿಯೂ 1 ಗ್ರಾಂ (24 ಕ್ಯಾರಟ್‌) ಬಂಗಾರಕ್ಕೆ ₹5,151 ರೂಪಾಯಿ ನಿಗದಿಯಾಗಿದೆ.

ದೈನಂದಿನ ಬೆಲೆ ಪ್ರಕ್ರಿಯೆಯಲ್ಲಿ ಇಂದು ಬೆಳಗಿನ ವೇಳೆಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 10 ಗ್ರಾಂ (22 ಕ್ಯಾರಟ್‌) ಚಿನ್ನದ ಬೆಲೆಗೆ ₹47,200 ರೂಪಾಯಿ ನಿಗದಿಯಾಗಿದೆ. ಬೆಂಗಳೂರಿನಲ್ಲಿ 10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರಟ್‌) ಬೆಲೆ ₹51,510 ರೂಪಾಯಿ ದಾಖಲಾಗಿದೆ.

ಪ್ರಮುಖ ನಗರಗಳಲ್ಲಿ ಇಂದು 10 ಗ್ರಾಂ ಚಿನ್ನದ ಬೆಲೆ ಹೀಗಿದೆ,

ಬೆಂಗಳೂರು: ₹47,200 (22 ಕ್ಯಾರಟ್‌) – ₹51,510 (24 ಕ್ಯಾರಟ್‌)

ಚೆನ್ನೈ: ₹48,550 (22 ಕ್ಯಾರಟ್‌) – ₹52,970 (24 ಕ್ಯಾರಟ್‌)

ದಿಲ್ಲಿ: ₹47,200 (22 ಕ್ಯಾರಟ್‌) – ₹51,510 (24 ಕ್ಯಾರಟ್‌)

ಹೈದರಾಬಾದ್‌: ₹47,200 (22 ಕ್ಯಾರಟ್‌) – ₹51,510 (24 ಕ್ಯಾರಟ್‌)

ಕೋಲ್ಕತಾ: ₹47,200 (22 ಕ್ಯಾರಟ್‌) – ₹51,510 (24 ಕ್ಯಾರಟ್‌)

ಮಂಗಳೂರು: ₹47,200 (22 ಕ್ಯಾರಟ್‌) – ₹51,510 (24 ಕ್ಯಾರಟ್‌)

ಮುಂಬಯಿ: ₹47,200 (22 ಕ್ಯಾರಟ್‌) – ₹51,510 (24 ಕ್ಯಾರಟ್‌)

ಮೈಸೂರು: ₹47,200 (22 ಕ್ಯಾರಟ್‌) – ₹51,510 (24 ಕ್ಯಾರಟ್‌)

ಬೆಳ್ಳಿ ದರ : ದೇಶದಲ್ಲಿ ಬೆಳ್ಳಿ ಬೆಲೆ ಒಂದು ಕೆಜಿಗೆ ₹62,700 ರೂಪಾಯಿ ದಾಖಲಾಗಿದೆ. ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ ₹67,600 ರೂ. ಇದೆ. ದೇಶಾದ್ಯಂತ ಕೆಲವು ನಗರಗಳನ್ನು ಹೊರತುಪಡಿಸಿ ಅನೇಕ ಕಡೆ ಬೆಳ್ಳಿ ಬೆಲೆಯಲ್ಲಿ ಏಕರೂಪವಿದೆ. ಚೆನ್ನೈ, ವಿಜಯವಾಡ, ಹೈದರಾಬಾದ್, ವಿಶಾಖಪಟ್ಟಣಂದಲ್ಲಿಯೂ ₹67,600 ರೂ. ನಿಗದಿಯಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button