ಜಿಲ್ಲಾ ಸುದ್ದಿಹುಬ್ಬಳ್ಳಿ - ಧಾರವಾಡ

ಹಣ ದುಪ್ಪಟ್ಟು ಮಾಡುವುದಾಗಿ ನಿವೃತ್ತ ವೈದ್ಯಾಧಿಕಾರಿಗೆ 50 ಲಕ್ಷ ರೂ ವಂಚನೆ

ಹುಬ್ಬಳ್ಳಿ: ನಿವೃತ್ತಿ ಹೊಂದಿದ್ದ  ವೈದ್ಯಧಿಕಾರಿಯೊಬ್ಬರಿಗೆ ಹಣ ಡಬ್ಲಿಂಗ್ ಮಾಡಿ ಕೊಡುವುದಾಗಿ ನಂಬಿಸಿ, 50 ಲಕ್ಷ ರೂಪಾಯಿ ವಂಚನೆ ಮಾಡಿರುವ ಘಟನೆ ಹುಬ್ಬಳ್ಳಿಯ ಗೋಕುಲ್ ರೋಡ್‌ನ ರುದ್ರಗಂಗಾ ಲೇಔಟ್‌ನಲ್ಲಿ ನಡೆದಿದ್ದು, ವಂಚನೆಗೆ ಒಳಗಾದ ನಿವೃತ್ತ್ ವೈದ್ಯಧಿಕಾರಿ ಈಗ ಹಣ ಕಳೆದುಕೊಂಡು ಗೋಕುಲ ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಿದ್ದಾರೆ. 

ನಗರದ ಗೋಕುಲ ರೋಡ್‌ನ ರುದ್ರಗಂಗಾ ಲೈಔಟ್ ನಿವಾಸಿ ಡಾಕ್ಟರ್ ಶೈಲಾ ಪಾಟೀಲ ಎಂಬುವವರೇ ವಂಚನೆಗೆ ಒಳಗಾದವರಾಗಿದ್ದಾರೆ. ನಿವೃತ್ತಿಯ ನಂತರ ಬಂದ ಹಣವನ್ನು ಸಂಗ್ರಹ ಮಾಡಿ ಇಡಲು ಯೋಚಿಸಿ ತಮ್ಮ ಸ್ನೇಹಿರಿಗೆ ತಿಳಿಸಿದ್ದರು. ಅವರ ಸ್ನೇಹಿತರು, ವಿದ್ಯಾನಗರದ ಬ್ಲಾಕ್ ಆಂಡ್ ವೈಟ್ ಫಿನ್ ಸೆಲ್ಯೂಷನ್‌ನ ಹಣ ಹೂಡಿಕೆ ಮಾಡಿ ಎಂದು ಸಲಹೆ ನೀಡಿದರು. ಇದರನ್ವಯ ಶೈಲಾ ಅವರು ಬ್ಲಾಕ್ ಆಂಡ್ ವೈಟ್ ಫಿನ್ ಸೆಲ್ಯೂಷನ್‌ನ ಸಿಇಒ ಮಣಿಕಂಠನ್ ನಾಯರ್ ಭೇಟಿಯಾಗಿ ಹಣವನ್ನು ನಂಬಿ ಅಲ್ಲಿ ಇಟ್ಟಿದ್ದಾರೆ.

ನಂತರ ಮಣಿಕಂಠನ್ ನಾಯರ್ ಮತ್ತು ಅವರ ತಾಯಿ ಕುಟತ್ ಗೋಪಾಲ ನಾಯರ ಎಂಬುವರು ಸೇರಿಕೊಂಡು ಹಣ ದುಪ್ಪಟ್ಟು ಮಾಡುವುದಾಗಿ ಶೈಲಾವರಿಗೆ ನಂಬಿಸಿ ಈಗ ಹಣ ನೀಡದೆ ವಂಚಿಸಿದ್ದು, ದಿಕ್ಕು ತೋಚದ ಶೈಲಾ ಪಾಟೀಲ ಅವರು ಈಗ ಗೋಕುಲ ರೋಡ್ ಪೊಲೀಸ್ ಠಾಣೆ ಮೊರೆ ಹೊಗಿದ್ದಾರೆ. ಸದ್ಯ ಪ್ರಕರಣ ದಾಖಲು ಮಾಡಿಕೊಂಡಿರುವ ಗೋಕುಲ್ ಠಾಣೆಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.‌

Spread the love

Related Articles

Leave a Reply

Your email address will not be published. Required fields are marked *

Back to top button