ಸಲಾಂ ರಾಕಿ ಬಾಯ್ ಎಂದು ಐರಾ ಯಶ್

ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಸಿನಿಮಾಗೆ ಇಡೀ ವಿಶ್ವವೇ ಸಲಾಂ ಎನ್ನುತ್ತಿದೆ. ಸಿನಿಮಾ ರಿಲೀಸ್ ಆಗಿ ಮೂರು ವಾರ ಕಳೆದಿದ್ದರು ಚಿತ್ರಕ್ಕೆ ಇನ್ನೂ ಉತ್ತರ ರೆಸ್ಪಾನ್ಸ್ ಪಡೆದುಕೊಳ್ತಿದೆ.
ಕೆಜಿಎಫ್’ ಸಿನಿಮಾದಲ್ಲಿ ರಾಕಿ ಭಾಯ್ ಖದರ್ ನೋಡಿ, ಇಡೀ ವಿಶ್ವವೇ ಸಲಾಂ ರಾಕಿ ಭಾಯ್ ಎನ್ನುತ್ತಿದೆ. ಬಾಕ್ಸಾಫೀಸ್ ಕೂಡ ರಾಕಿ ಖದರ್‌ಗೆ ಸಲಾಂ ಹೊಡೆಯುತ್ತಿದೆ. ಈ ಮಧ್ಯೆ ಯಶ್ ಪುತ್ರಿ ಐರಾ ಕೂಡ ಸಲಾಂ ರಾಕಿ ಭಾಯ್ ಎಂದು ಹಾಡಿದ್ದು ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.
ಯಶ್ ಪುತ್ರಿ ಐರಾ ‘ಕೆಜಿಎಫ್ ಚಾಪ್ಟರ್ 1’ ಚಿತ್ರದ ಹಾಡನ್ನು ಹಾಡಿದ್ದಾರೆ. ‘ಸಲಾಂ ರಾಕಿ ಭಾಯ್ ಎಂದು ಹಾಡಿದ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದೇ ವಿಡಿಯೋ ವೈರಲ್ ಆಗುತ್ತಿತ್ತು. ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಯಶ್, ಐರಾ ಹಾಡಿರುವ ವಿಡಿಯೋವನ್ನು ಶೇರ್ ಮಾಡಿದ್ದಷ್ಟೇ ಅಲ್ಲ. ‘ಪ್ರತಿದಿನ ಎದ್ದ ಕೂಡಲೇ ರಾಕಿ ಬಗ್ಗೆ ತಮಾಷೆಮಾಡಲೇಬೇಕು.’ ಎಂದು ಪ್ರೀತಿ ಬರೆದುಕೊಂಡು ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಯಶ್ ಅಭಿಮಾನಿಗಳು ಈ ಮುದ್ದಾದ ವಿಡಿಯೋವನ್ನು ಎಲ್ಲಾ ಕಡೆ ಶೇರ್ ಮಾಡುತ್ತಿದ್ದಾರೆ.
