ಹುಬ್ಬಳ್ಳಿಯ ಗಲಭೆ ಪ್ರಕರಣದಲ್ಲಿ ಇಲ್ಲಿಯವರೆಗೆ 146 ಜನರ ಬಂಧನ: ಪೊಲೀಸ್ ಆಯುಕ್ತರಾದ ಲಾಬೂರಾಮ್ ಹೇಳಿಕೆ

ಹುಬ್ಬಳ್ಳಿ: ಹುಬ್ಬಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಲಾಖೆಯ ಅಧಿಕಾರಿಗಳು ತನಿಖೆಯನ್ನು ಕೈಗೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ದಿನದವರೆಗೂ 146 ಜನರನ್ನು ಬಂಧನ ಮಾಡಲಾಗಿದೆ. ಈ ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರು, ಅವರನ್ನು ಬೀಡುವ ಮಾತೇಯಿಲ್ಲಾ ಎಂದು ಹುಬ್ಬಳ್ಳಿ ಧಾರವಾಡ ನಗರ ಪೊಲೀಸ್ ಆಯುಕ್ತರಾದ ಲಾಬೂರಾಮ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈಗಾಗಲೇ ಗಲಭೆ ಪ್ರಕರಣದ ಕುರಿತು ನಮ್ಮ ಇಲಾಖೆಯ ತನಿಖಾಧಿಕಾರಿಗಳು ತನಿಕೆಯನ್ನು ಚುರುಕು ಮಾಡಿದ್ದಾರೆ. ಕಳೆದ ದಿನವೂ ಕೂಡಾ ಹಲವರನ್ನು ಬಂಧನ ಮಾಡಿದ್ದಾರೆ. ಬಂಧಿತರ ಮೇಲೆ ಬೇರೆ ಬೇರೆ ಪ್ರಕರಣಗಳನ್ನು ದಾಖಲು ಮಾಡಲಾಗುತ್ತಿದೆ. ವಿಚಾರಣೆ ಇನ್ನೂ ಪ್ರಗತಿಯಲ್ಲಿ ಇದೆ. ಪ್ರಕರಣದಲ್ಲಿ ಯಾರೇ ಇದ್ದರೂ ಕೂಡಾ ಅವರನ್ನು ವಶಕ್ಕೆ ಪಡೆದು ಕಾನೂನು ರೀತಿ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ ಎಂದರು.
ಅವಳಿ ನಗರದ ಕ್ರಿಮಿನಲ್ ಗಳ ಮೇಲೆಯು ಇಲಾಖೆ ಹದ್ದಿನ ಕಣ್ಣು ಇಟ್ಟಿದೆ
ಹುಬ್ಬಳ್ಳಿಯ ಗಲಭೆ ನಡೆದ ಸಂದರ್ಭದಲ್ಲಿ ಯಾರಾದರೂ ರೌಡಿಶೀಟರ್ಗಳು ಭಾಗಿಯಾಗಿದ್ದಾರಾ ಎಂಬುವುದರ ಬಗ್ಗೆ ಅಧಿಕಾರಿಗಳು ಈಗ ತನಿಖೆ ಕೈಗೊಂಡಿದ್ದಾರೆ. ಇದರ ಜೊತೆಗೆ ಅವಳಿನಗರದ ಕ್ರಿಮಿನಲ್ ಗಳ ಮೇಲೆಯು ಹದ್ದಿನ ಕಣ್ಣು ಇಡಲಾಗಿದೆ. ಯಾರೇ ಕ್ರಮಿನಲ್ ಆ್ಯಕ್ಟಿವಿಟಿಯಲ್ಲಿ ಭಾಗವಹಿಸಿದ್ದರೆ ಅವರ ಮೇಲೆಯೂ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುತ್ತಿದೆ.
ಹುಬ್ಬಳ್ಳಿಯ ಗಲಭೆ ಪ್ರಕರಣದಲ್ಲಿ ಬಂಧಿತ ಆರೋಪಿಗಳಲ್ಲಿ ಇಬ್ಬರೂ ರೌಡಿಶೀಟರಗಳು ಇದ್ದಾರೆ ಎಂಬುವುದು ತಿಳಿದು ಬಂದಿದೆ. ಕಾನೂನು ಕೈಗೆತ್ತಿಕೊಂಡವರನ್ನು ನಾವು ಸುಮ್ಮನೆ ಬೀಡುವ ಮಾತೇ ಇಲ್ಲ. ಗಲಭೆ ಪ್ರಕರಣದಲ್ಲಿ ಇನ್ನೂ ಯಾರ್ಯಾರು ಭಾಗಿಯಾಗಿದ್ದಾರೆ ಅದರ ಕುರಿತು ಮಾಹಿತಿ ಕಲೆ ಹಾಕಲಾಗುತ್ತಿದೆ. ಮಾಹಿತಿ ಆಧರಿಸಿ ಉಳಿದವರನ್ನು ಕೂಡಾ ಬಂಧನ ಮಾಡಲಾಗುವುದು ಎಂದು ತಿಳಿಸಿದರು.
