Breaking NewsLatestಕಲಬುರ್ಗಿಕ್ರೈಂಜಿಲ್ಲಾ ಸುದ್ದಿರಾಜ್ಯಸುದ್ದಿ

ಪಿಎಸ್ಐ ನೇಮಕಾತಿ ಅಕ್ರಮ ತನಿಕೆ ಚುರುಕು: ಆರ್.ಡಿ.ಪಾಟೀಲ್ ಗೆ ಲಾಕಪ್‌ನಲ್ಲೂ ವಿಷೇಶ ಆತಿಥ್ಯ

ಕಲಬುರಗಿ: ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣ ತನಿಖೆಯಲ್ಲಿ ಸಿಐಡಿ ಮತ್ತಷ್ಟು ತೀವ್ರಗೊಳಿಸಿದೆ. ಪ್ರಕರಣದ ಕಿಂಗ್‌ಪಿನ್ ಕಲಬುರಗಿ ಜಿಲ್ಲೆಯವರು ಎಂಬುದು ದಟ್ಟವಾದ ಶಂಕೆ ಹಿನ್ನಲೆ ಸಿಐಡಿಯ ಉನ್ನತ ಮಟ್ಟದ ಅಧಿಕಾರಿಗಳು ಇಲ್ಲಿಯೇ ಟಿಕಾಣಿ ಹೂಡಿ ತನಿಕೆ ಚುರುಕುಗೊಳಿಸಿದ್ದಾರೆ.

ಸಿಐಡಿ ಡಿಜಿ ಪಿ.ಎಸ್ ಸಂದು ಮತ್ತು ಸಿಐಡಿ ಎಸ್ಪಿ ರಾಘವೇಂದ್ರ ಹೆಗಡೆ ಕಲಬುರಗಿಗೆ ಬಂದು ಟಿಕಾಣಿ ಹುಡಿದ್ದಾರೆ. ಸ್ವತಃ ತನಿಖೆಯ ಉಸ್ತುವಾರಿ ಸಿಐಡಿ ಡಿಜಿ ನೋಡಿಕೊಳ್ಳುತ್ತಿದ್ದಾರೆ. ಕಲಬುರಗಿಯ ಸಿಐಡಿ ಕಛೇರಿಗೆ ಆಗಮಿಸಿದ ಎಸ್ಪಿ ತನಿಖೆಯ ಪ್ರಗತಿ ಪರಿಶೀಲನೆ ಮಾಡುತ್ತಿದ್ದಾರೆ.
ಪಾಟೀಲ್ ಬ್ರದರ್ಸ್‌ ದರ್ಪ
ಇನ್ನೊಂದೆಡೆ ಪ್ರಕರಣದ ಕಿಂಗ್‌ಪಿನ್ ಎ‌ನ್ನಲಾದ ಪಾಟೀಲ್ ಬ್ರದರ್ಸ್ ಸಿಐಡಿ ವಶದಲ್ಲಿದ್ದರೂ ದರ್ಪ ಕಡಿಮೆ ಆಗ್ತಿಲ್ಲ, ಒಂದಡೆ ಆರ್.ಡಿ. ಪಾಟೀಲ್ ಕ್ಯಾಮರಾಗಳಿಗೆ ಬೆರಳು ತೋರಿಸಿ ಪ್ರಚಾರ ಮಾಡ್ತಿದ್ದೀರಿ ಮಾಡಿ ಅಂತ ಹೇಳ್ತಾನೆ. ಸಿಐಡಿ ವಶದಲ್ಲಿರುವ ಕಾರಣ ರಾತ್ರಿ ಎಂ.ಬಿ ನಗರ ಠಾಣೆಯ ಕಂಬಿಹಿಂದೆ ಇಟ್ಟರೆ ಅಲ್ಲಿಯೂ ಕಾಲು ಮೇಲೆ ಕಾಲು ಹಾಕಿಕೊಂಡು ಕುಳಿತು ದರ್ಪ ತೋರಿದ್ದಾನೆ. ಲಾಕಪ್‌ನಲ್ಲಿ ಆರ್.ಡಿ.ಪಾಟೀಲ್ ಗೆ ವಿಶೇಷ ಆತಿಥ್ಯ ಸಿಗ್ತಿದ್ದೇಯಾ ಎಂಬ ಅನುಮಾನ ಕೂಡಾ ಕಾಡ್ತಿವೆ.

ಇದಕ್ಕೆ ಪೂರಕವಾಗಿ ಲಾಕಪ್‌ನಲ್ಲಿಯೂ ಕುಳಿತುಕೊಳ್ಳಲು ಖುರ್ಚಿ ಕೊಟ್ಟಿರುವ ಪೊಟೋ ವೈರಲ್ ಆಗಿವೆ. ಮತ್ತೊಂದೆಡೆ ಆರೋಪಿ ಮಹಾಂತೇಶ್ ಪಾಟೀಲ್ ಜಬರ್ದಸ್ತ್ ದೌಲತ್ ತೋರಿದ್ದಾನೆ.ಕ್ಯಾಮರಾಗಳ ಮುಂದೆ ದೌಲತ್ ತೋರಿದ ಆರೋಪಿ ಮಹಾಂತೇಶ್ ಪಾಟೀಲ್, ಹಾಕ್ರಿ ಹಾಕ್ರಿ ಛೆಂದ ಹಾಕ್ರಿ ಟಿವಿಯಾಗ ನ್ಯೂಸ್, ಬರಲೀ ಛೆಂದ ಬರ್ಲಿ ನ್ಯೂಸ್ ಅಂತ ದರ್ಪದ ಮಾತು ಆಡಿದ್ದಾನೆ. ಇಂದು ಮೆಡಿಕಲ್ ಮಾಡಿಸಿ ಸಿಐಡಿ ಕಚೇರಿಗೆ ಕರೆತರುವಾಗ ಮಹಾಂತೇಶ್ ಪಾಟೀಲ್ ಧಿಮಾಕಿನ ಮಾತು ಆಡಿದ್ದಾನೆ.

ಸಿಐಡಿ ಖೆಡ್ಡಾಗೆ ಬಿದ್ರು ದರ್ಪ, ಘಮಂಡ್, ಇಳಿಯುತ್ತಿಲ್ಲ ನೂರಾರು ಜನ ಅಭ್ಯರ್ಥಿಗಳು, ಪೊಷಕರು ಹಿಡಿ ಶಾಪ್ ಹಾಕಿದ್ರು ಬ್ರದರ್ಸ್‌ಗಳಿಗೆ ಪಾಪ ಪ್ರಜ್ಞೆ ಕಾಡುತ್ತಿಲ್ವಾ ಅನ್ನೋ ಪ್ರಶ್ನೆ ಸಾರ್ವಜನಿಕರನ್ನ ಕಾಡ್ತಿದೆ‌.

Spread the love

Related Articles

Leave a Reply

Your email address will not be published. Required fields are marked *

Back to top button