ಹಳೇ ಹುಬ್ಬಳ್ಳಿ ಗಲಭೆ ಪ್ರಕರಣ: AIMIM ಪಕ್ಷದ ಮತೋರ್ವ ಮುಖಂಡನ ಬಂಧನ

ಹುಬ್ಬಳ್ಳಿ : ಹಳೇ ಹುಬ್ಬಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದು ಒಬ್ಬರನಂತರ ಒಬ್ಬರನ್ನು ಈಗ ಪೊಲೀಸರು ಎಳೆದು ತರುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ AIMIM ಪಕ್ಷದ ಪಾಲಿಕೆ ಸದಸ್ಯರೊಬ್ಬರನ್ನು ಬಂಧನ ಮಾಡಿದ್ದು, ಈಗ ಅದೇ ಪಕ್ಷದ ಮತ್ತೋರ್ವ ಮುಖಂಡನನ್ನು ಪೊಲೀಸರು ಬಂಧನ ಮಾಡಿದ್ದಾರೆ.
ಎಐಎಂಐಎಂ ಪಕ್ಷದ ಜಿಲ್ಲಾಧ್ಯಕ್ಷ ಹಾಗೂ ಕಾರ್ಪೋರೇಟರ್ ನಜೀರ್ ಅಹ್ಮದ ಹೊನ್ಯಾಳನನ್ನು ಈಗಾಗಲೇ ಹಳೇ ಹುಬ್ಬಳ್ಳಿಯ ಪೊಲೀಸರು ಬಂಧನ ಮಾಡಿದ್ದಾರೆ. ಇದೀಗ ಅದೇ ಪಕ್ಷದ ನಗರ ಘಟಕದ ಅಧ್ಯಕ್ಷ ದಾದಾಫೀರ್ ಬೆಟಗೇರಿಯನ್ನು ಪೊಲೀಸರು ಬಂಧನ ಮಾಡಿ, ವಿಚಾರಣೆಗೆ ಒಳಪಡಿಸಿದ್ದಾರೆ.
ಕಳೆದ ದಿನ ದಾದಾಪೀರ್ ಬೆಟಗೇರಿಯನ್ನು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಕರೆತಂದಿದ್ದ ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದಾರೆ. ಕಳೆದ ಎರಡು ದಿನದ ಹಿಂದಷ್ಟೇ ಜಿಲ್ಲಾಧ್ಯಕ್ಷ ನಜೀರ್ ಅಹ್ಮದ ಹೊನ್ಯಾಳ ಬಂಧನವಾಗಿದ್ದು, ಈಗ ಕಳೆದ ದಿನ AIMIM ಪಕ್ಷದ ದಾದಾಫೀರ್ನನ್ನು ಬಂಧನ ಮಾಡಿರುವುದು ತೀವ್ರ ಕುತೂಹಲ ಹುಟ್ಟು ಹಾಕಿದ್ದು, ಬಂಧಿತನಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವೆಲ್ಲಾ ಮಾಹಿತಿಗಳು ಹೊರ ಬೀಳಲಿವೆ ಎಂಬುವುದನ್ನು ಕಾದು ನೋಡಬೇಕಾಗಿದೆ.
