IPL 2022ಕ್ರಿಕೆಟ್ಕ್ರೀಡೆ

ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಆರ್ ಸಿ ಬಿಗೆ ಹೀನಾಯ ಸೋಲು

ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ ತಂಡ, ಇನ್ನಿಂಗ್ಸ್ ನ 2ನೇ ಓವರ್ ನಲ್ಲಿ ಫಾಫ್ ಡು ಪ್ಲೆಸಿಸ್, ವಿರಾಟ್ ಕೊಹ್ಲಿ ಹಾಗೂ ಅನುಜ್ ರಾವತ್ ಅವರ ವಿಕೆಟ್ ಗಳನ್ನು ಕಳೆದುಕೊಂಡ ಬಳಿಕ ಚೇತರಿಸಿಕೊಳ್ಳಲೇ ಇಲ್ಲ. ಮಾರ್ಕೋ ಜಾನ್ಸೆನ್ (25ಕ್ಕೆ 3), ಟಿ.ನಟರಾಜನ್ (10ಕ್ಕೆ 3), ಜೆ.ಸುಚಿತ್ (12ಕ್ಕೆ 2) ದಾಳಿಗೆ ನಲುಗಿದ ಆರ್ ಸಿಬಿ 16.1 ಓವರ್ ಗಳಲ್ಲಿ 68 ರನ್ ಗೆ ಆಲೌಟ್ ಆಯಿತು.

ಪ್ರತಿಯಾಗಿ ಅಲ್ಪ ಮೊತ್ತದ ಚೇಸಿಂಗ್ ನಲ್ಲಿ ಯಾವ ಸಮಸ್ಯೆಯನ್ನೂ ಎದುರಿಸದ ಸನ್ ರೈಸರ್ಸ್ ತಂಡ 8 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 72 ರನ್ ಬಾರಿಸಿ ಗೆಲುವು ಕಂಡಿತು. ತೀರಾ ಅಲ್ಪ ಮೊತ್ತದ ಗುರಿಯಾಗಿದ್ದರೂ, ಅಭಿಷೇಕ್ ಶರ್ಮ (47ರನ್, 28 ಎಸೆತ, 8 ಬೌಂಡರಿ, 1 ಸಿಕ್ಸರ್) ಆಕರ್ಷಕ ಬ್ಯಾಟಿಂಗ್ ಮೂಲಕ ಗಮನಸೆಳೆದರು.

ಚೇಸಿಂಗ್ ಆರಂಭಿಸಿದ ಸನ್ ರೈಸರ್ಸ ಹೈದರಾಬಾದ್ ತಂಡ ಸಲೀಸಾಗಿ ಮೊತ್ತವನ್ನು ಬೆನ್ನಟ್ಟಿತು. ಯುವ ಆರಂಭಿಕ ಬ್ಯಾಟ್ಸ್ ಮನ್ ಅಭಿಷೇಕ್ ಶರ್ಮ ಏಕಾಂಗಿಯಾಗಿ ಆರ್ ಸಿಬಿ ಬೌಲರ್ ಗಳನ್ನು ಚೆಂಡಾಡಿದರು. ಮೊಹಮದ್ ಸಿರಾಜ್ ಎಸೆದ ಮೊದಲ ಓವರ್ ನಲ್ಲಿ ಕೇವಲ 2 ರನ್ ಬಿಟ್ಟುಕೊಟ್ಟರೆ, ಹ್ಯಾಸಲ್ ವುಡ್ ಎಸೆದ 2ನೇ ಓವರ್ ನಲ್ಲಿ 8 ರನ್ ನೀಡಿದರು.

ಆ ನಂತರದ ಓವರ್ ಗಳಲ್ಲಿ ಬ್ಯಾಟಿಂಗ್ ಪ್ರತಾಪ ತೋರಿದ ಅಭಿಷೇಕ್ ಶರ್ಮ, ಸುಲಭವಾಗಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಸನ್ ರೈಸರ್ಸ್ ತಂಡದ ಆಟವನ್ನು ನೋಡಿದರೆ, ಪಂದ್ಯವನ್ನು ಪವರ್ ಪ್ಲೇ ಒಳಗೇ ಮುಕ್ತಾಯ ಮಾಡುವ ರೀತಿಯಲ್ಲಿ ಕಾಣುತ್ತಿತ್ತು. ಆದರೆ, ಕೇನ್ ವಿಲಿಯಮ್ಸನ್ ತಾಳ್ಮೆಯ ಆಟವಾಡಿದರು.

ಐಪಿಎಲ್ ನಲ್ಲಿ 8ನೇ ಬಾರಿಗೆ 100ಕ್ಕಿಂತ ಕಡಿಮೆ ಮೊತ್ತವನ್ನು ಬಾರಿಸಿದ ಕುಖ್ಯಾತಿಯನ್ನು ಆರ್ ಸಿಬಿ ಪಡೆದುಕೊಂಡಿತು. ಡೆಲ್ಲಿ ಕ್ಯಾಪಿಟಲ್ಸ್ ತಂಡ 9 ಬಾರಿ ಈ ಕುಖ್ಯಾತಿಗೆ ಭಾಜನವಾಗಿದ್ದರೆ, ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡ 6 ಬಾರಿ100ಕ್ಕಿಂತ ಕಡಿಮೆ ಮೊತ್ತಕ್ಕೆ ಆಲೌಟ್ ಆಗಿದೆ. ಪಂಜಾಬ್ ಕಿಂಗ್ಸ್ ತಂಡ 5 ಬಾರಿ ಈ ಕುಖ್ಯಾತಿ ಪಡೆದುಕೊಂಡಿದೆ.

Spread the love

Related Articles

Leave a Reply

Your email address will not be published. Required fields are marked *

Back to top button