ಮನರಂಜನೆಸಿನಿಮಾಸೆಲೆಬ್ರಿಟಿ

ಸಿನಿಮಾದ ಯಶಸ್ಸಿನ ಬಗ್ಗೆ ಮಾತನಾಡಿದ ರಶ್ಮಿಕಾ ಮಂದಣ್ಣ

ಕನ್ನಡದ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಬಣ್ಣದ ಬದುಕಿಗೆ ಕಾಲಿಟ್ಟ ನಟಿ ರಶ್ಮಿಕಾ ಯಾರು ನಿರೀಕ್ಷಿಸದ ಮಟ್ಟಿಗೆ ಹೆಸರು ಮಾಡಿದ್ದಾರೆ. ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಆರೇ ಆರು ವರ್ಷದಲ್ಲಿ ಸ್ಟಾರ್ ನಟಿಯ ಪಟ್ಟ ಗಿಟ್ಟಿಸಿಕೊಂಡಿರೋ ರಶ್ಮಿಕಾಗೆ ಟಾಲಿವುಡ್ ಹಾಗೂ ಬಾಲಿವುಡ್ ಚಿತ್ರರಂಗದಲ್ಲಿ ದೊಡ್ಡ ಮಟ್ಟಿಗಿನ ಬೇಡಿಕೆ ಇದೆ. ತಮ್ಮ ಸಿನಿಮಾದ ಯಶಸ್ಸಿನ ಕುರಿತಾಗಿ ರಶ್ಮಿಕಾ ಮಾತನಾಡಿದ್ದಾರೆ.

ನಟ ಅಲ್ಲು ಅರ್ಜುನ್, ಮಹೇಶ್ ಬಾಬು, ಅಮಿತಾಬ್ ಬಚ್ಚನ್, ಸಿದ್ದಾರ್ಥ್ ಮೆಲ್ಹೋತ್ರಾ, ರಣಬೀರ್ ಕಪೂರ್ ಸೇರಿದಂತೆ ಸಾಕಷ್ಟು ಸ್ಟಾರ್ ನಟರ ಜೊತೆ ಸ್ಕ್ರೀನ್ ಶೇರ್ ಮಾಡುವ ಅವಕಾಶವನ್ನ ರಶ್ಮಿಕಾ ಪಡೆದುಕೊಂಡಿದ್ದಾರೆ. ಈ ಕುರಿತು ಮಾತನಾಡಿರುವ ರಶ್ಮಿಕಾ, “ಚಿತ್ರರಂಗ ನಿಜಕ್ಕೂ ಎಗ್ಸೈಟ್ ಮೆಂಟ್ ನೀಡುತ್ತಿದೆ. ನಾನು ಹಲವು ಕ್ರೇಜಿ ಸಿನಿಮಾಗಳನ್ನು ಮಾಡುತ್ತಿದ್ದೇನೆ. ಎಲ್ಲಾ ಸಿನಿಮಾಗಳ ಪಾತ್ರಗಳು ಒಂದಕ್ಕಿಂತ ಒಂದು ಭಿನ್ನವಾಗಿದೆ. ಪ್ರತಿ ಸಿನಿಮಾದಲ್ಲಿ ಭಿನ್ನ ಪಾತ್ರಗಳನ್ನು ಮಾಡುವುದರಿಂದ, ಭಿನ್ನ ಜೀವನ ನಡೆಸಿದಂತೆ ಫೀಲ್ ಆಗುತ್ತದೆ. ಅದ್ಭುತ ನಟರು, ನಿರ್ದೇಶಕರು ಹಾಗೂ ಇತರರಿಂದ ವಿಭಿನ್ನ ವಿಷಯಗಳನ್ನು ಕಲಿಯುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

2016ರಲ್ಲಿ ತೆರೆಕಂಡ ಕಿರಿಕ್ ಪಾರ್ಟಿ ಚಿತ್ರದಿಂದ ದೊಡ್ಡ ಮಟ್ಟದಲ್ಲಿ ಯಶಸ್ಸು ಸಾಧಿಸಿದರು. ಬಳಿಕ ತೆಲುಗು ಚಿತ್ರರಂಗದಿಂದ ಆಫರ್ ಬರೋಕೆ ಶುರುವಾಯ್ತು. ಗೀತ ಗೋವಿಂದಂ ಸಿನಿಮಾದ ನಟನೆಯಿಂದ ರಶ್ಮಿಕಾ ಬೇಡಿಕೆ ಹೆಚ್ಚಿದ್ದು ಸದ್ಯ ರಶ್ಮಿಕಾ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ.

Spread the love

Related Articles

Leave a Reply

Your email address will not be published. Required fields are marked *

Back to top button