Breaking NewsLatestಕಲಬುರ್ಗಿಜಿಲ್ಲಾ ಸುದ್ದಿರಾಜ್ಯಸುದ್ದಿ
ಸದಾಶಿವ ಆಯೋಗ ವರದಿ ಅನುಷ್ಠಾನ: ಸಿಎಂ ಎದುರು ವಿಷ ಸೇವಿಸಲು ಯತ್ನ

ಕಲಬುರಗಿ: ಸದಾಶಿವ ಆಯೋಗ ವರದಿ ವಿಷಯವಾಗಿ ಸಿಎಂ ಮುಂದೆ ವಿಷ ಸೇವಿಸಲು ಆಗಮಿಸುತ್ತಿದ್ದ ಹೋರಾಟಗಾರರನ್ನು ಐವಾನ್ ಶಾಹಿ ಗೆಸ್ಟ್ ಹೌಸ್ ಬಳಿ ಪೊಲೀಸರು ಬಂಧಿಸಿದ್ದಾರೆ.
ಸದಾಶಿವ ಆಯೋಗದ ವರದಿಯನ್ನು ಇಟ್ಟುಕೊಂಡು ಕುಳಿತುಕೊಳ್ಳುವ ಬದಲಾಗಿ ಅನುಷ್ಠಾನಗೊಳಿಸಿ ಅಥವಾ ತಿರಸ್ಕರಿಸಿ ಅಂತ ಹೋರಾಟಗಾರರು ಒತ್ತಾಯಿಸಿದ್ದಾರೆ. ಇದೇ ವಿಷಯವಾಗಿ ಪ್ರತಿಭಟನೆ ಮೂಲಕ ಸಿಎಂ ಭೇಟಿಗೆ ಆಗಮಿಸುತ್ತಿದ್ದ ಹೋರಾಟಗಾರರು ಸಿಎಂ ಮುಂದೆ ವಿಷ ಸೇವಿಸಲಿದ್ದಾರೆ ಎಂಬ ಮಾಹಿತಿ ಸಿಗುತ್ತಿದ್ದಂತೆ ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ದಶರಥ ಕಲಗುರ್ತಿ ಸೇರಿ 5-6 ಜನರನ್ನು ಪೊಲೀಸರು ಅರೆಸ್ಟ್ ಮಾಡಿ ಕರೆದೊಯ್ದಿದ್ದಾರೆ. ಈ ವೇಳೆ ಹೋರಾಟಗಾರರು ಸಿಎಂ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು. ಬೊಮ್ಮಾಯಿ ನಾಲಾಯಕ್ ಸಿಎಂ ಎಂದು ಘೋಷಣೆ ಕೂಗಿದರು.
