Breaking NewsLatestಕ್ರೈಂವಿದೇಶಸುದ್ದಿ
ಉಕ್ರೇನ್ ಯೋಧರಿಗೆ ರಷ್ಯಾದಿಂದ ಕೊನೆ ಎಚ್ಚರಿಕೆ!

ಮಾಸ್ಕೊ: ಉಕ್ರೇನ್ ಸೇನೆಗೆ ತಕ್ಷಣವೇ ಶಸ್ತ್ರಾಸ್ತ್ರ ತ್ಯಜಿಸಲು ರಷ್ಯಾ ರಕ್ಷಣಾ ಸಚಿವಾಲಯ ತಾಕೀತು ಮಾಡಿದೆ. ಬಂದರು ನಗರ ಮರಿಯುಪೊಲ್ ರಕ್ಷಣೆಗೆ ನಿಂತಿರುವ ಉಕ್ರೇನ್ ಸೈನಿಕರು ಮತ್ತು ಬಾಡಿಗೆ ಸೈನಿಕರು ಪ್ರತಿರೋಧ ಕೈಬಿಡಬೇಕು. ಶಸ್ತ್ರತ್ಯಾಗಕ್ಕೆ ವಿಧಿಸಿರುವ ಅಂತಿಮ ಗಡುವು ಮಂಗಳವಾರ ಮಧ್ಯಾಹ್ನದಿಂದಲೇ ಶುರುವಾಗಿದೆ.
ಉಕ್ರೇನಿನ ಪೂರ್ವ ಭಾಗ ಕೇಂದ್ರೀಕರಿಸಿ ರಷ್ಯಾ ಪಡೆಗಳು ಹೊಸ ದಾಳಿ ಆರಂಭಿಸಿವೆ ಎಂದು ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಹೇಳಿಕೆ ನೀಡಿದ ಬೆನ್ನಲ್ಲೇ ರಷ್ಯಾ ರಕ್ಷಣಾ ಸಚಿವಾಲಯದಿಂದ ಈ ಎಚ್ಚರಿಕೆ ಹೊರಬಿದ್ದಿದೆ.
ಅರ್ಥಹೀನ ಪ್ರತಿರೋಧ ತೋರುತ್ತಿರುವ ಸೈನಿಕರಿಗೆ ತಕ್ಷಣ ಶಸ್ತ್ರ ತ್ಯಜಿಸಲು ಆದೇಶ ರವಾನಿಸುವಂತೆ ಕೀವ್ ಅಧಿಕಾರಿಗಳಿಗೆ ಮತ್ತೊಮ್ಮೆ ಎಚ್ಚರಿಕೆ ನೀಡಲಾಗಿದೆ. ಕೀವ್ ಅಧಿಕಾರಿಗಳಿಂದ ಈ ಸಂದೇಶ ರವಾನೆಯಾಗದಿದ್ದರೆ ಹೋರಾಟಗಾರರು ಸ್ವಯಂಪ್ರೇರಿತವಾಗಿ ಶಸ್ತ್ರತ್ಯಜಿಸಲು ನಿರ್ಧರಿಸಬೇಕು ಎಂದು ರಕ್ಷಣಾ ಸಚಿವಾಲಯ ತಾಕೀತು ಮಾಡಿದೆ.
