Breaking NewsLatestಕ್ರೈಂರಾಷ್ಟ್ರೀಯಸುದ್ದಿ
ಮೋದಿ ಮತ್ತು ಅಮಿತ್ ಶಾರ ಬಗ್ಗೆ ನಿಂದನಾತ್ಮಕ ಮಿಮಿಕ್ರಿ: 38 ವರ್ಷದ ವ್ಯಕ್ತಿ ಅರೆಸ್ಟ್

ಜಬಲ್ ಪುರ: ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ದ ನಿಂದಾನಾತ್ಮಕ ಪದ ಬಳಿಕಿ ಮಿಮಿಕ್ರಿ ಮಾಡಿದ್ದ ಆರೋಪದ ಮೇರೆಗೆ ಮಧ್ಯ ಪ್ರದೇಶದ ಜಬಲ್ ಪುರದಲ್ಲಿ ಸೋಮವಾರ 38 ವರ್ಷದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ.
ಈತ ಮಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅದಿಲ್ ಆಲಿ ಬಂಧಿತ ಆರೋಪಿ.
ಈತ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ವಿರುದ್ಧ ಅವಹೇಳನಾಕಾರಿಯಾಗಿ ಮಾತನಾಡಿ ಮಿಮಿಕ್ರಿ ಮಾಡಿದ್ದಕ್ಕೆ ಆತನನ್ನು ಬಂಧಿಸಲಾಗಿದೆ ಎಂದು ಜಬಲ್ ಪುರ ಎಸ್ ಪಿ ಸಿದ್ದಾರ್ಥ್ ಬಹುಗುಣ ತಿಳಿಸಿದ್ದಾರೆ. ಐಪಿಸಿ ಸೆಕ್ಷನ್ 153, ಸೆಕ್ಷನ್ 294ರ ಅಡಿಯಲ್ಲಿ ಒಮ್ಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಎಸ್ ಪಿ ಹೇಳಿದ್ದಾರೆ.
