ರಾಷ್ಟ್ರೀಯವಾಣಿಜ್ಯಸುದ್ದಿಹಣಕಾಸು ವಿಚಾರ

ವಾಣಿಜ್ಯ ತೆರಿಗೆ ಇಲಾಖೆ ದಾಖಲೆ ಆದಾಯ

ರಾಜಾಸ್ತಾನದ ವಾಣಿಜ್ಯ ತೆರೆಗೆ ಇಲಾಖೆಯು ಕಳೆದ ಹಣಕಾಸು ವರ್ಷದಲ್ಲಿ 50883 ಕೋಟಿ ರೂಪಾಯಿಗಳ ದಾಖಲೆಯ ಆದಾಯ ಗಳಿಸಿದೆ.

ಅಧಿಕೃತ ಹೇಳೀಕೆಯ ಪ್ರಕಾರ ಇಲಾಖೆಯು 2021-22ರಲ್ಲಿ ರೂ. 50,883.48 ಕೋಟಿ ಆದಾಯವನ್ನು ಸಂಗ್ರಹಿಸಿದೆ. ಹಿಂದಿನ ಆರ್ಥಿಕ ವರ್ಷಕ್ಕೆ ಹೋಲಿಸಿದರೆ 25.91 ಶೇಕಡಾ ಬೆಳವಣಿಗೆಯನ್ನು ದಾಖಲಿಸಿದೆ.

ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಮತ್ತು ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಮೂಲಕ ಇಲಾಖೆಯು ಮಾರ್ಚ್​ನಲ್ಲಿಯೇ ರೂ.4574.17 ಕೋಟಿ ಮತ್ತು ವರ್ಷದಲ್ಲಿ ರೂ.48.111.51 ಕೋಟಿ ಗಳಿಸಿದೆ. ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತ ರವಿ ಜೈನ್ ಮಾತನಾಡಿ, 2021-22ರಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ 10,469 ಕೋಟಿ ರೂ. ಆದಾಯ ನಷ್ಟ ತಡೆಯುವಲ್ಲಿಯೂ ಇಲಾಖೆ ಗಣನೀಯ ಯಶಸ್ಸು ಕಂಡಿದೆ ಎಂದಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button