Latestವಿದೇಶಸುದ್ದಿ

ಉಕ್ರೇನ್‌ ಗೆ ಬ್ರಿಟನ್‌ ಪ್ರಧಾನಿ ಬೋರಿಸ್‌ ನೆರವು

ರಷ್ಯಾ ಮತ್ತು ಉಕ್ರೇನ್‌ ನಡುವಿನ ಯುದ್ಧ ಮಾತ್ರ ನಿಲ್ಲುತ್ತಿಲ್ಲ. ಈಗಾಗಲೇ ಸಾಕಷ್ಟು ಸಾವು-ನೋವು ಸಂಭವಿಸಿವೆ. ಉಕ್ರೇನ್‌ ಅಧ್ಯಕ್ಷ ಜಗತ್ತಿನ ರಾಷ್ಟ್ರಗಳಿಂದ ಅಗತ್ಯ ಶಸ್ತ್ರಾಸ್ತ್ರ ನೆರವನ್ನು ಬಯಸಿದ್ದಾರೆ.

ಈ ನಡುವೆ ಬ್ರಿಟನ್‌ ಪ್ರಧಾನಿ ಉಕ್ರೇನ್‌ಗೆ ಭೇಟಿ ನೀಡಿದ್ದಾರೆ. ರಾಜಧಾನಿ ಕೀವ್‌ನಲ್ಲಿ ಬೀದಿ ಬೀದಿಗಳನ್ನು ಸುತ್ತಿ ರಷ್ಯಾ ಸೇನೆ ಸೃಷ್ಟಿ ಮಾಡಿದ ಯುದ್ಧದ ಭೀಕರತೆಯನ್ನು ಪರಿಶೀಲನೆ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ರಷ್ಯಾ ವಿರುದ್ಧ ಸೆಣಸಾಡಲು ಹೆಚ್ಚಿನ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡಲಾಗುವುದು ಎಂದು ಝೆಲೆನ್ಸ್ಕಿಗೆ ಭರವಸೆ ನೀಡಿದರು. ಈ ಭೇಟಿಯೊಂದಿಗೆ ಉಕ್ರೇನ್‌ಗೆ ತಮ್ಮ ದೀರ್ಘಕಾಲದ ಬೆಂಬಲವನ್ನು ಮುಂದುವರಿಸುವುದಾಗಿ ಬೋರಿಸ್ ಜಾನ್ಸನ್ ಹೇಳಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button