ಕೆಜಿಎಫ್-2 ಚಿತ್ರತಂಡದಿಂದ ಮಹಿಳೆಯರಿಗೆ ವಿಶೇಷ ಶೋ!

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷೆಯ ಸಿನಿಮಾ ಕೆಜಿಎಫ್-2 ರಿಲೀಸ್ ಗೆ ದಿನಗಣನೆ ಶುರವಾಗಿದೆ. ಈಗಾಗಲೇ ಸಖತ್ ಸದ್ದು ಮಾಡಿರುವ ಸಿನಿಮಾ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇದೇ ತಿಂಗಳು 14 ರಂದು ಸಿನಿಮಾ ಬಿಡುಗಡೆಯಾಗಲಿದೆ. ಕನ್ನಡದಲ್ಲಷ್ಟೇ ಅಲ್ಲ, ಹಿಂದಿ, ತೆಲುಗು, ತಮಿಳು, ಮಲಯಾಳಂನಲ್ಲೂ ಸಂಚಲನ ಮೂಡಿಸಿದೆ. ಇದೀಗ ಕೆಜಿಎಫ್ ಚಿತ್ರತಂಡ ಯಶ್ ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್ ನೀಡಿದೆ.
ಹೌದು ಯಶ್ ಅಭಿನಯದ ಕೆಜಿಎಫ್-2 ನೋಡಲು ಎಲ್ಲರೂ ಕಾತುರದಿಂದ ಕಾಯುತ್ತಿದ್ದಾರೆ. ಯಶ್ ಗಡ್ಡಕ್ಕೆ, ಸಖತ್ ಲುಕ್‌ಗೆ, ಅವರ ಡ್ರೆಸ್‌ಗೆ, ಅವರ ಸ್ಟೈಲ್‌ಗೆ ಮಹಿಳಾ ಮಣಿಗಳು ಫುಲ್ ಫಿದಾ ಆಗಿದ್ದಾರೆ. ಮಹಿಳಾ ಅಭಿಮಾನಿಗಳಿಗೆಂದೇ ಸಿನಿಮಾದ ವಿಶೇಷ ಶೋ ರೆಡಿಯಾಗಿದೆ.
ಬೆಂಗಳೂರಿನ ಕೆಂಗೇರಿಯ ವೆಂಕಟೇಶ್ವರ ಚಿತ್ರಮಂದಿರದಲ್ಲಿ ಯಶ್ ಮಹಿಳಾ ಅಭಿಮಾನಿಗಳಿಗಾಗಿ ಕೆಜಿಎಫ್ ಚಾಪ್ಟರ್ 2 ಸ್ಪೆಷಲ್ ಶೋ ನಡೆಯಲಿದೆ. ಏಪ್ರಿಲ್ 14ರಂದು ವೆಂಕಟೇಶ್ವರ ಚಿತ್ರಮಂದಿರದಲ್ಲಿ ಬೆಳಗ್ಗೆ 9 ಗಂಟೆ ಶೋ ಮಹಿಳೆಯರಿಗೆ ಮೀಸಲು ಇಡಲಾಗಿದೆ. ಇದೀಗ ಕೆಜಿಎಫ್ ಹೊಸ ದಾಖಲೆ ಬರೆದಿದೆ. ಈಗಾಗಲೇ ಯಶ್ ಲೇಡಿ ಫ್ಯಾನ್ಸ್ ಅಸೋಸಿಯೇಷನ್ ಈ ವಿಶೇಷ ಪ್ರದರ್ಶನಕ್ಕೆ ಸಿದ್ದತೆ ಮಾಡಿಕೊಳ್ಳುತ್ತಿದೆ. ಭಾನುವಾರ ಈ ವಿಶೇಷ ಶೋ ಬಗ್ಗೆ ಅಧಿಕೃತವಾಗಿ ಯಶ್ ಫ್ಯಾನ್ಸ್ ತಿಳಿಸಲಿದ್ದಾರೆ.
