Breaking NewsLatestಕಲಬುರ್ಗಿಕ್ರೈಂಜಿಲ್ಲಾ ಸುದ್ದಿ

ಕಾರು-ಬೈಕ್ ನಡುವೆ ಡಿಕ್ಕಿ: ಮದುಮಗ ಸೇರಿ ಇಬ್ಬರು ಸಾವು

ಕಲಬುರಗಿ: ಮದುವೆಯ ಆಮಂತ್ರಣ ಪತ್ರಿಕೆ ಕೊಡಲು ಬೈಕ್​​ನಲ್ಲಿ ಹೋಗುತ್ತಿದ್ದ ವೇಳೆ ಸಂಭವಿಸಿದ ಅಪಘಾತದಲ್ಲಿ ಮದುಮಗ ಹಾಗೂ ಆತನ ಸ್ನೇಹಿತ ಸಾವನ್ನಪ್ಪಿರುವ ಘಟನೆ ಜೇವರ್ಗಿ ತಾಲೂಕಿನ ಜೇರಟಗಿ ಗ್ರಾಮದ ಬಳಿ ನಡೆದಿದೆ. ಯಡ್ರಾಮಿ ತಾಲೂಕು ಕೋಣಶಿರಸಗಿ ಗ್ರಾಮದ ದೇವೇಂದ್ರಪ್ಪ (30) ಹಾಗೂ ವಸ್ತಾರಿ ಗ್ರಾಮದ ಗುರುರಾಜ್ (30) ಎಂಬುವರು ಮೃತ ದುರ್ದೈವಿಗಳು.

ದೇವೇಂದ್ರಪ್ಪ ಅವರ ಮದುವೆ ನಿಶ್ಚಯವಾಗಿತ್ತು. ಹೀಗಾಗಿ, ಸಂಬಂಧಿಕರಿಗೆ ಆಮಂತ್ರಣ ಪತ್ರಿಕೆ ಕೊಡಲೆಂದು ಇಬ್ಬರು ಬೈಕ್ ಮೇಲೆ ಜೇರಟಗಿ ಕಡೆಗೆ ಹೊರಟ್ಟಿದ್ದಾಗ ಯಮರೂಪದ ಕಾರು ಬಂದು ಬೈಕ್‌ಗೆ ಡಿಕ್ಕಿ ಹೊಡೆದು ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ.

ವಿಜಯಪುರ ಮೂಲದ ಕಾರೊಂದು ವೇಗವಾಗಿ ಬಂದು ಮತ್ತೊಂದು ವಾಹನ ಓವರ್‌ಟೇಕ್ ಮಾಡಲು ಹೋಗಿ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಇಬ್ಬರು ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ. ಘಟನೆಯಲ್ಲಿ ಓರ್ವ ಯವಕನ ದೇಹ ಛಿದ್ರವಾಗಿದೆ. ಕಾರಿನಲ್ಲಿದ್ದವರಿಗೂ ಗಾಯಗಳಾಗಿವೆ. ಅವರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತಕ್ಕೆ ಕಾರು ಚಾಲಕನ ನಿರ್ಲಕ್ಷ್ಯವೇ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಕುರಿತು ನೆಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

Spread the love

Related Articles

Leave a Reply

Your email address will not be published. Required fields are marked *

Back to top button