ಆಹಾರಲೈಫ್ ಸ್ಟೈಲ್
ಬದನೆಕಾಯಿ ಎಣ್ಣೆಗಾಯಿ

ಬೇಕಾಗುವ ಸಾಮಾಗ್ರಿಗಳು
ಬದನೆಕಾಯಿ 4-5
ಈರುಳ್ಳಿ 2
ಉಪ್ಪು ರುಚಿಗೆ ತಕ್ಕಷ್ಟು
ಅರಿಶಿಣ ಚಿಟಿಕೆ
ಅಡುಗೆ ಎಣ್ಣೆ
ಸಾಸಿವೆ
ಶೇಂಗಾ ಬೀಜದ ಪುಡಿ 4ಟೀ ಸ್ಫೂನ್
ಟೊಮೆಟೋ 2
ಅಚ್ಚ ಖಾರದ ಪುಡಿ 2 ಟೀ ಚಮಚ
ಹುಣಸೆ ಹಣ್ಣಿನ ರಸ 1 ಟೀ ಚಮಚ
ಮಾಡುವ ವಿಧಾನ: ಮೊದಲಿಗೆ ಈರುಳ್ಳಿಯನ್ನು ಚಿಕ್ಕದಾಗಿ ಹೆಚ್ಚಿಕೊಳ್ಳಬೇಕು. ಬಳಿಕ ಹೆಚ್ಚಿದ ಟೊಮಟೋ, ಶೇಂಗಾ ಪುಡಿ, ಉಪ್ಪು, ಹುಣಸೆ ರಸ ಹಾಗೂ ಖಾರದ ಪುಡಿ ಸೇರಿಸಿ ಚೆನ್ನಾಗಿ ಕಲಸಿಕೊಳ್ಳಬೇಕು. ಬಳಿಕ ಬದನೆಕಾಯಿಯನ್ನು ಚೆನ್ನಾಗಿ ತೊಳೆದು ನಾಲ್ಕು ಭಾಗವಾಗಿ ಕಟ್ ಮಾಡಿಕೊಳ್ಳಬೇಕು. ಕಲಸಿಟ್ಟ ಮಿಶ್ರಣವನ್ನು ಕಟ್ ಮಾಡಿದ ಬದನೆಕಾಯಿಯೊಳಗೆ ತುಂಬಿಸಬೇಕು.
ಒಂದು ಬಾಣಲೆಗೆ ಅಡುಗೆ ಎಣ್ಣೆ ಹಾಕಿ ಎಣ್ಣೆ ಕಾದ ಬಳಿಕ ಸಾಸಿವೆ,ಬೆಳ್ಳುಳ್ಳಿ, ಅರಿಶಿಣ ಹಾಗೂ ಹೆಚ್ಚಿದ ಈರುಳ್ಳಿ ಸೇರಿಸಿ ಹುರಿದುಕೊಳ್ಳಬೇಕು. ನಂತರ ಮಸಾಲೆ ತುಂಬಿಸಿದ ಬದನೆಕಾಯಿ ಹಾಕಿ ಸ್ವಲ್ಪ ನೀರು ಸೇರಿಸಿ ಬೇಯಿಸಬೇಕು. ಬಿಸಿ ಬಿಸಿಯಾಗಿ ಇರುವಾಗ್ಲೆ ರೊಟ್ಟಿ, ಚಪಾತಿ ಜೊತೆ ಸೇವಿಸಬೇಕು.




