Breaking NewsLatest

ಜುಲೈ 19 ಹಾಗೂ 22 ರಂದು SSLC ಪರೀಕ್ಷೆ ನಿಗದಿ : ಸಚಿವ ಸುರೇಶ್ ಕುಮಾರ್​

ಬೆಂಗಳೂರು : ಕೊರೊನಾದಿಂದ ನಿಂತಿದ್ದ ಎಸ್​​ಎಸ್​​ಎಲ್​ಸಿ ಪರೀಕ್ಷೆಯನ್ನು ಜುಲೈ 19 ರಿಂದ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ವರ್ಷ 2 ದಿನ ಎಸ್ಎಸ್ಎಲ್​ಸಿ ಪರೀಕ್ಷೆಗಳು ನಡೆಯಲಿದೆ. ಜುಲೈ 19 ರಂದು ವಿಜ್ಞಾನ, ಸಮಾಜ ವಿಜ್ಞಾನ, ಗಣಿತ ಪರೀಕ್ಷೆ ನಡೆಯಲಿದೆ. ಜುಲೈ 22 ರಂದು ಕನ್ನಡ, ಇಂಗ್ಲಿಷ್, ಹಿಂದಿ ಪರೀಕ್ಷೆಗಳು ನಡೆಯಲಿವೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಶಿಕ್ಷಣ ಸಚಿವ ಎಸ್​​ ಸುರೇಶ್​ ಕುಮಾರ್​, ಎಸ್ಎಸ್ಎಲ್​ಸಿ ಪರೀಕ್ಷೆ ನಡೆಯುವ ಜುಲೈ 19 ಮತ್ತು 22 ರಂದು ಪರೀಕ್ಷೆ ನಡೆಯುವ 200 ಮೀ. ಸುತ್ತಳತೆಯಲ್ಲಿ ಸೆಕ್ಷನ್ 144 (ನಿಷೇಧಾಜ್ಞೆ) ಜಾರಿಗೊಳಿಸಲಾಗುವುದು. ಈ ವರ್ಷ ಸರಳವಾದ ಮಾದರಿಯಲ್ಲಿ ಎಸ್ಎಸ್ಎಲ್​​​ಸಿ ಪರೀಕ್ಷೆ ನಡೆಸಲಾಗುವುದು. ಓಎಂಆರ್ ಶೀಟ್​ನಲ್ಲಿ ವಿದ್ಯಾರ್ಥಿಗಳು ಉತ್ತರಗಳನ್ನು ಭರ್ತಿ ಮಾಡಬೇಕು. ಜುಲೈ 19 ಮತ್ತು 22ರಂದು ಬೆಳಗ್ಗೆ 10.30ರಿಂದ 1.30ರವರೆಗೆ ಪರೀಕ್ಷೆಗಳು ನಡೆಯಲಿವೆ ಎಂದು ತಿಳಿಸಿದ್ದಾರೆ.

ಪರೀಕ್ಷೆಯಲ್ಲಿ ಭಾಗಿಯಾಗಲಿರೋ ಎಲ್ಲ ಅಧಿಕಾರಿಗಳು, ಶಿಕ್ಷಕರಿಗೆ ವ್ಯಾಕ್ಸಿನ್ ಮಾಡಿಸಿಕೊಳ್ಳಬೇಕು. ಒಂದು ವಾರದ ಒಳಗೆ ಎಲ್ಲರೂ ವ್ಯಾಕ್ಸಿನ್ ಮಾಡಿಸಿಕೊಳ್ಳಬೇಕು ಎಂದು ಆರೋಗ್ಯ ಇಲಾಖೆಯಿಂದ ಆದೇಶ ಹೋಗಲಿದೆ.

 

Spread the love

Related Articles

Leave a Reply

Your email address will not be published. Required fields are marked *

Back to top button