ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಆರೋಗ್ಯ ಸಚಿವ ಸುಧಾಕರ್, ಆ ಚಿತ್ರ ಯಾವುದು ಗೊತ್ತಾ?

ಸ್ಯಾಂಡಲ್ ವುಡ್ ಅನ್ನೋದು ವಿಶಾಲವಾದ ರಂಗ. ಇದರಲ್ಲಿ ಬೇರೆ ಬೇರೆ ಕ್ಷೇತ್ರಗಳಾದ ಕ್ರೀಡೆ, ರಾಜಕೀಯ ಹೀಗೆ ಅನೇಕ ಜನರನ್ನು ಚಿತ್ರರಂಗ ಸೆಳೆದುಕೊಳ್ಳುತ್ತೆ. ಕ್ರಿಕೆಟ್ನಲ್ಲಿ ನಿವೃತ್ತಿ ಪಡೆದ ಕೆಲವರು ಸಿನಿಮಾದಲ್ಲಿ ನಟಿಸಿದ ಉದಾಹರಣೆ ಇದೆ. ಅದೇ ರೀತಿ, ರಾಜಕೀಯ ನಾಯಕರು ಸಿನಿಮಾದಲ್ಲಿ ನಟಿಸಿದ ನಿದರ್ಶನ ಇದೆ. ಇದೀಗ ಬಣ್ಣದ ಲೋಕಕ್ಕೆ ಮತ್ತೊಬ್ಬರು ಎಂಟ್ರಿಕೊಡುತ್ತಿದ್ದಾರೆ. ಬೇರೆ ಯಾರು ಅಲ್ಲ ಆರೋಗ್ಯ ಸಚಿವ ಡಾ. ಸುಧಾಕರ್.
ಹೌದು ತನುಜಾ ಎಂಬ ಸಿನಿಮಾದಲ್ಲಿ ಅವರು ನಟಿಸುತ್ತಿದ್ದಾರೆ. ಇದು ರಿಯಲ್ ಲೈಫ್ ಘಟನೆ ಆಧರಿಸಿದ ಸಿನಿಮಾ. ಕೋವಿಡ್ ಸಂದರ್ಭದಲ್ಲಿ ನೀಟ್ ಪರೀಕ್ಷೆ ಬರೆಯಲು ಸುಮಾರು 350ಕಿಮೀ ದೂರ ಪ್ರಯಾಣ ಮಾಡಿ ಗಮನ ಸೆಳೆದಿದ್ದ ಹುಡುಗಿಯ ಕಥೆ ರೋಚಕತೆಯಿಂದ ಕೂಡಿದೆ. ಆ ಘಟನೆ ಎಲ್ಲರ ಗಮನ ಸೆಳೆದಿತ್ತು. ಇದನ್ನೇ ಒನ್ಲೈನ್ ಸ್ಟೋರಿಯಾಗಿಸಿಕೊಂಡು ನಿರ್ದೇಶಕ ಹರೀಶ್ ಎಂ.ಡಿ ಹಳ್ಳಿಯವರು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಅದರಲ್ಲಿ ಬಿ.ಎಸ್. ಯಡಿಯೂರಪ್ಪ ನಟಿಸುತ್ತಿರುವ ಬಗ್ಗೆ ಈ ಮೊದಲು ಘೋಷಣೆ ಆಗಿತ್ತು. ಈಗ ಸುಧಾಕರ್ ಕೂಡ ಚಿತ್ರ ತಂಡ ಸೇರಿಕೊಂಡಿದ್ದಾರೆ.
ಇನ್ನು ಈ ಘಟನೆ ನಡೆದಾಗ ಬಿ. ಎಸ್ ಯಡಿಯೂರಪ್ಪ ಅವರೇ ಸಿಎಂ ಆಗಿದ್ದರು. ಡಾ. ಸುಧಾಕರ್ ಅವರು ಆರೋಗ್ಯ ಸಚಿವರಾಗಿದ್ದರು. ತಮ್ಮ ರಿಯಲ್ ಲೈಫ್ ಪಾತ್ರಕ್ಕೆ ಅವರು ಬಣ್ಣ ಹಚ್ಚುತ್ತಿದ್ದಾರೆ. ಇದು ಸಿನಿಪ್ರಿಯರ ಮತ್ತು ರಾಜಕೀಯ ವಲಯದವರಲ್ಲಿ ನಿರೀಕ್ಷೆ ಮೂಡಿಸಿದೆ.
ರಾಜೇಶ್ ನಟರಂಗ, ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಕಾಸರಗೋಡು ಖ್ಯಾತಿಯ ಸಪ್ತಾ ಪಾವೂರ್, ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್, ಸಂಧ್ಯಾ ಅರಕೆರೆ, ಕೈಲಾಶ್, ಬಾಲ ನಟಿ ಬೇಬಿ ಶ್ರೀ ಸೇರಿದಂತೆ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಹರೀಶ್ ಎಂ.ಡಿ ಹಳ್ಳಿ ಅವರು ನಿರ್ದೇಶನ ಮಾಡುತ್ತಿದ್ದು, ‘ಬಿಯಾಂಡ್ ವಿಷನ್ಸ್ ಸಿನಿಮಾಸ್’ ಸಂಸ್ಥೆ ಮೂಲಕ ಈ ಚಿತ್ರ ನಿರ್ಮಾಣವಾಗುತ್ತದೆ. ಈ ಸಿನಿಮಾ ಹೆಸರು ಕೇಳಿದ ಪ್ರೇಕ್ಷಕರಿಗೆ ಬೆಟ್ಟದಷ್ಟು ನಿರೀಕ್ಷೆ ಮೂಡಿದೆ.
