
24 ವರ್ಷಗಳ ನಂತರ ಪಾಕಿಸ್ತಾನ ಪ್ರವಾಸದಲ್ಲಿರುವ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಮೊದಲ T20 ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ 3ವಿಕೆಟ್ಗಳ ಜಯಗಳಿಸಿದೆ.
ನಾಯಕ ಆರನ್ ಫಿಂಚ್ ಅವರು 55 ರನ್ ಗಳಿಸಿ ತಂಡದ ಗೆಲುವಿಗೆ ಕಾರಣರಾದರು. ಫಿಂಚ್ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಫಿಂಚ್ರವರ ಈ ನಿರ್ಣಯವನ್ನು ಆಸ್ಟ್ರೇಲಿಯನ್ ಬೌಲರ್ಗಳು ಪಾಕಿಸ್ತಾನದ 8 ವಿಕೆಟನ್ನು ತೆಗೆದು ಅದರ ಸ್ಕೋರನ್ನು 162ರನ್ನುಗಳಿಗೆ ಸೀಮಿತಗೊಳಿಸುವುದರೊಂದಿಗೆ ಬೆಂಬಲಿಸಿದರು.
ನಂತರ ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 7 ವಿಕೆಟ್ಗಳನ್ನು ಕಳೆದುಕೊಂಡು 163 ರನ್ನುಗಳನ್ನು ಗಳಿಸುವುದರೊಂದಿಗೆ ಗೆಲುವಿನ ನಗೆಬೀರಿತು. ಕೋವಿಡ್ ಪರೀಕ್ಷೆಯ ನಂತರ ಒನ್ಡೆ ಸರಣಿಯಿಂದ ಹೊರಗುಳಿದಿದ್ದ ಜೋಶ್ ಇಂಗ್ಲೀಶ್ ಕೂಡ ಚುರುಕಾದ 24 ರನ್ ಗಳಿಸಿದರು. ಮಾರ್ಕಸ್ ಸ್ಟೋನಿಸ್ ಸಹ 9 ಬೌಲ್ಗಳಲ್ಲಿ 5 ಬೌಂಡರಿಗಳನ್ನು ಬಾರಿಸಿದರು.




