ಚಿಕ್ಕಮಗಳೂರು
ಸೇವಾ ತಂಡದಿಂದ ಚೆಕ್ಡ್ಯಾಮ್ ಸ್ವಚ್ಛತಾ ಕಾರ್ಯ

ಚಿಕ್ಕಮಗಳೂರು: ಶೌರ್ಯ ಶ್ರೀ ಧರ್ಮಸ್ಥಳ ರಾಷ್ಟ್ರೀಯ ವಿಪತ್ತು ನಿರ್ವಹಣೆ ತಂಡ ಹಾಗೂ ಶಿವಗಿರಿ ಸೇವಕರು ತಂಡದಿಂದ ಮೂಡಿಗೆರೆ ತಾಲೂಕಿನ ಕನ್ನಾಪುರದಲ್ಲಿ ರೈತರು ಕೃಷಿಗೆ ಬಳಸುವ ಚೆಕ್ ಡ್ಯಾಮ್ ಸ್ವಚ್ಛತಾ ಕಾರ್ಯ ಮಾಡಲಾಯಿತು.
ಚೆಕ್ ಡ್ಯಾಮ್ ನಲ್ಲಿ ಹುಲ್ಲು, ಪೊದೆಗಳು ಬೆಳೆದು, ಕಸ ಕಡ್ಡಿಗಳಿಂದ ತುಂಬಿ, ಕಳೆದ ಕೆಲ ದಿನಗಳಿಂದ ಸುರಿಯುತ್ತಿದ್ದ ಮಳೆಯಿಂದಾಗಿ ಮರದ ಕೊಂಬೆಗಳು ಹಾಗೂ ಕಸ ತುಂಬಿಕೊಂಡು ಸಾರಾಗ ನೀರಿನ ಹರಿಯುವಿಕೆಗೆ ತೊಂದರೆಯಾಗಿತ್ತು. ಇದನ್ನು ಗಮನಿಸಿ ಶ್ರಮದಾನದ ಮೂಲಕ ಸ್ವಚ್ಛ ಗೊಳಿಸಲಾಯಿತು. ಸಂಯೋಜಕ ಪ್ರವೀಣ್ ಪೂಜಾರಿ ಹಾಗೂ ಅರುಣ್ ಪಿಂಟೋ ಸ್ವಯಂಸೇವಕರಾದ ರವಿಪೂಜಾರಿ, ಹರೀಶ್ ಗೌಡ, ಮಂಜುನಾಥ್ ಹಾಗೂ ವಿನಿತ್ ಪೂಜಾರಿ ಇದ್ದರು.




