ಮನರಂಜನೆಸಿನಿಮಾ

ದಳಪತಿ ವಿಜಯ್ ಗೆ ಜೋಡಿಯಾದ ರಶ್ಮಿಕಾ ಮಂದಣ್ಣ

ಕೊಡಗಿನ ಕುವರಿ ನಟಿ ರಶ್ಮಿಕಾ ಮಂದಣ್ಣ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ರಶ್ಮಿಕಾ ಕಾಲ್ ಶೀಟ್ ಪಡೆಯೋಕೆ ನಿರ್ಮಾಪಕರು ಕ್ಯೂನಲ್ಲಿ ನಿಂತಿದ್ದಾರೆ. ರಶ್ಮಿಕಾ ಮಾತ್ರ ಅಳೆದು ತೂಗಿ ಪಾತ್ರಗಳನ್ನ ಆಯ್ಕೆ ಮಾಡಿಕೊಳ್ತಿದ್ದಾರೆ. ಸದ್ಯ ರಶ್ಮಿಕಾ ನಟನೆಯ ಹೊಸ ಸಿನಿಮಾದ ಘೋಷಣೆಯಾಗಿದ್ದು ನಟ ದಳಪತಿ ವಿಜಯ್ ಜೊತೆ ಸ್ಕ್ರೀನ್ ಶೇರ್ ಮಾಡ್ತಿದ್ದಾರೆ.

ನಟ ವಿಜಯ್ ಸದ್ಯ ಬೀಸ್ಟ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ಚಿತ್ರ ಏಪ್ರಿಲ್ 13ರಂದು ರಿಲೀಸ್ ಆಗ್ತಿದೆ. ಈ ಮಧ್ಯೆ ದಳಪತಿ ವಿಜಯ್ ನಟನೆಯ 66ನೇ ಸಿನಿಮಾಗೆ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

‘ದಳಪತಿ 66’ ಚಿತ್ರಕ್ಕೆ ವಂಶಿ ಪೈಡಿಪಲ್ಲಿ ಅವರು ನಿರ್ದೇಶನ ಮಾಡುತ್ತಿದ್ದು, ಖ್ಯಾತ ನಿರ್ಮಾಪಕ ದಿಲ್ ರಾಜು ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದು ಪ್ಯಾನ್ ಇಂಡಿಯಾ ಸಿನಿಮಾ. ದಕ್ಷಿಣ ಭಾರತ ಹಾಗೂ ಬಾಲಿವುಡ್ ನಲ್ಲಿ ಭಾರೀ ಬೇಡಿಕೆ ಇರುವ ಹಿನ್ನೆಲೆಯಲ್ಲಿ ರಶ್ಮಿಕಾಗೆ ಮಣೆ ಹಾಕಲಾಗಿದೆ.

ಸದ್ಯ ರಶ್ಮಿಕಾ ‘ಮಿಷನ್ ಮಜ್ನು’ ಹಾಗೂ ‘ಗುಡ್ ಬೈ’ ಸಿನಿಮಾಗಳ ಶೂಟಿಂಗ್ ನಲ್ಲಿ ಬ್ಯುಸಿ ಆಗಿದ್ದಾರೆ. ಜೊತೆಗೆ ಸದ್ಯದಲ್ಲೇ ‘ಪುಷ್ಪ 2’ ಚಿತ್ರದ ಶೂಟಿಂಗ್ ನಲ್ಲೂ ಪಾಲ್ಗೊಳ್ಳಲಿದ್ದಾರೆ. ಜೊತೆಗೆ  ದುಲ್ಖರ್ ಸಲ್ಮಾನ್ ಜೊತೆ ಮತ್ತೊಂದು ಸಿನಿಮಾ ಅನೌನ್ಸ್ ಆಗಿದೆ. ಈ ಚಿತ್ರದಲ್ಲಿ ರಶ್ಮಿಕಾ ಕಾಶ್ಮೀರಿ ಹುಡುಗಿ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button