Breaking NewsLatestಚಿಕ್ಕಬಳ್ಳಾಪುರಜಿಲ್ಲಾ ಸುದ್ದಿ

ಶಿಡ್ಲಘಟ್ಟದ ಕರಗ ಉತ್ಸವದಲ್ಲಿ ಅಶ್ಲೀಲ ನೃತ್ಯ, ಮುಂದೇನಾಯ್ತು ಗೊತ್ತಾ?

ಚಿಕ್ಕಬಳ್ಳಾಪುರ: ಎರಡು ವರ್ಷ ಕೊರೊನಾದಿಂದ ಧಾರ್ಮಿಕ ಚಟುವಟಿಕೆಗಳು ಸರಳವಾಗಿ ನಡೆಯುತಿತ್ತು. ಆದರೆ ಕೋವಿಡ್ ಕಡಿಮೆಯಾಗಿದ್ದರಿಂದ ಎಲ್ಲೆಲ್ಲೂ ಜಾತ್ರೆ, ಉತ್ಸವ, ಸಭೆ, ಸಮಾರಂಭಗಳು ಜೋರಾಗಿ ನಡೆಯುತ್ತಿವೆ. ಕಳೆದ 3 ವರ್ಷಗಳಿಂದ ಇಲ್ಲಿನ ಇತಿಹಾಸ ಪ್ರಸಿದ್ದ ಕರಗ ಉತ್ಸವ ನಡೆಯಿತು. ಈಗ ಕೊರೊನಾ ಮಾಯವಾದ ಕಾರಣ ಕರಗ ಉತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಆದರೆ ಧಾರ್ಮಿಕ ಕರಗ ಉತ್ಸವದಲ್ಲಿ ಅಶ್ಲೀಲ ನೃತ್ಯಗಳಿಗೇನು ಕಡಿಮೆ ಇರಲಿಲ್ಲ. ಗಂಡ ಹೆಂಡತಿಯೇ ನಾಚಿ ನೀರಾಗುವ ಹಾಗೆ ಕರಗ ಉತ್ಸವದಲ್ಲಿ ಆಯೋಜಿಸಿದ್ದ ಆರ್ಕೆಸ್ಟ್ರಾದಲ್ಲಿ 20 ವರ್ಷದ ಆರ್ಕೆಸ್ಟ್ರಾ ನಟಿಮಣಿಯರು 80 ವರ್ಷದ ಮುದುಕನ ಜೊತೆ ಬೆಡ್‍ರೂಂ ದೃಶ್ಯ ಸೃಷ್ಟಿಸಿ, ರೊಮ್ಯಾನ್ಸ್ ಮಾಡಿದ್ದು, ಪಡ್ಡೆ ಹೈಕಳಿಗೆ ರೋಮಾಂಚನ ತಂದಿತು.

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರದ ವೇಣುಗೋಪಾಲಸ್ವಾಮಿ ದೇವಸ್ಥಾನದ ಕರಗ ಉತ್ಸವ ನಡೆಯುತಿತ್ತು. ಈ ವೇಳೆ ಆರ್ಕೆಸ್ಟ್ರಾದವರನ್ನು ಆಯೋಜಿಸಲಾಗಿತ್ತು. ಶಿಡ್ಲಘಟ್ಟ ನಗರದ ರೇಣುಕಾ ಯಲ್ಲಮ್ಮ ಹೂವಿನ ಕರಗೋತ್ಸವ ಪ್ರಯುಕ್ತ, ಶಿಡ್ಲಘಟ್ಟ ಕ್ಷೇತ್ರದ ಶಾಸಕ ವಿ.ಮುನಿಯಪ್ಪ ಅಭಿಮಾನಿ ಬಳಗ, ತುಮಕೂರು ಮೂಲದ ಅರುಣ್ ಈವೆಂಟ್ಸ್ ಎಂಬ ಆರ್ಕೆಸ್ಟ್ರಾವನ್ನು ಕರೆಸಿತ್ತು. ಆರ್ಕೆಸ್ಟ್ರಾದವರು ನೆರೆದಿದ್ದ ಜನಸ್ತೋಮದ ಮುಂದೆ ಮಾನ, ಮರ್ಯಾದೆ ಎಲ್ಲಾ ಬಿಟ್ಟು ಧಾರ್ಮಿಕ ಉತ್ಸವದಲ್ಲಿ ನಂಗನಾಚ್ ರೀತಿಯಲ್ಲಿ ಅಶ್ಲೀಲ ನೃತ್ಯ ಪ್ರದರ್ಶನ ಮಾಡಿದ್ದರು.
ಇನ್ನು ಕಾಂಗ್ರೆಸ್ ಮುಖಂಡರು ಆಯೋಜಿಸಿದ್ದ ಆರ್ಕೆಸ್ಟ್ರಾದಲ್ಲಿ ಅಶ್ಲೀಲ ನೃತ್ಯ ಪ್ರದರ್ಶನವಾಗುತ್ತಿದ್ದರೆ. ಇತ್ತ ಶಿಡ್ಲಘಟ್ಟದ ಮೋದಿ ಬ್ರಿಗೇಡ್ ಹಾಗೂ ಭಜರಂಗದಳ ಕಾರ್ಯಕರ್ತರು, ತಾವೇನು ಕಡಿಮೆ ಎಂದು ಕೆಎಸ್‍ಆರ್ಟಿಸಿ ಬಸ್ ನಿಲ್ದಾಣದ ಬಳಿ, ಕಾವ್ಯ ಮೆಲೋಡಿಸ್‍ರವರನ್ನು ಕರೆಯಿಸಿ, ಆರ್ಕೆಸ್ಟ್ರಾ ಆಯೋಜನೆ ಮಾಡಿದ್ದರು. ಆರ್ಕೇಸ್ಟ್ರಾದಲ್ಲಿ ತೆಲುಗಿನ ರೊಮ್ಯಾನ್ಸ್ ಚಲನಚಿತ್ರ ಗೀತೆಗಳಿಗೆ ಹುಡುಗಿಯರಿಂದ ನೃತ್ಯ ಪ್ರದರ್ಶನ ಮಾಡಿಸಿದರು. ನಂತರ ರೇಣುಕಾ ಯಲ್ಲಮ್ಮ ಹೂವಿನ ಕರಗ, ಅದ್ದೂರಿಯಾಗಿ ನೃತ್ಯ ಮಾಡುವುದರ ಮೂಲಕ ಭಕ್ತಿಯ ಸಿಂಚನ ಮೂಡಿಸಿತು. 3 ವರ್ಷಗಳ ನಂತರ ಕೊರೊನಾ ಭೀತಿ ಮರೆತು ಭಕ್ತರು ಸಂಭ್ರಮಾಚರಣೆಯಲ್ಲಿ ತೇಲಾಡಿದರು.

Spread the love

Related Articles

Leave a Reply

Your email address will not be published. Required fields are marked *

Back to top button