Breaking NewsLatestಜಿಲ್ಲಾ ಸುದ್ದಿಹಾಸನ

ಭಯಾನಕ ಭವಿಷ್ಯ ನುಡಿದ ಕೋಡಿಮಠದ ಶ್ರೀಗಳು: ಸುಂದರ ಹೆಣ್ಣು ಮಕ್ಕಳ ಅಂಗಾಂಗ ತಿನ್ನುತ್ತವೆ!

ಹಾಸನ: ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ದಿನಕ್ಕೊಂದು ಭವಿಷ್ಯ ನುಡಿಯುತ್ತಿದ್ದಾರೆ. ಇದೀಗ ಅವರು ಮತ್ತೊಂದು ಭಯಾನಕವಾದ ಭವಿಷ್ಯ ನುಡಿದಿದ್ದಾರೆ. ಈ ವರ್ಷದ ಮಳೆ ಕೆಂಡಮಂಡಲ. ಈ ಬಾರಿ ಮುಂಗಾರು ಚೆನ್ನಾಗಿ ಆಗುತ್ತದೆ, ಹಿಂಗಾರು ಕಡಿಮೆಯಾಗಲಿದೆ. ಅಶಾಂತಿ, ಮತೀಯ ಗಲಭೆ, ದೊಂಬಿಗಳು, ಸಾವು, ಕೊಲೆ ನೋವುಗಳು ಹೆಚ್ಚಾಗಲಿವೆ. ಸುಂದರವಾದ ಹೆಣ್ಣು ಮಕ್ಕಳ ಅಂಗಾಂಗವನ್ನ ತಿನ್ನುತ್ತವೆ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ. ವಿಶೇಷವಾಗಿ ಎಲೆಕ್ಟ್ರಿಕ್‌ನಿಂದ ಹೆಚ್ಚು ಅಪಾಯವಿದೆ ಎಂದು ಮಾರ್ಮಿಕವಾಗಿ ಕೋಡಿಮಠ ಶ್ರೀ ನುಡಿದಿದ್ದಾರೆ

ಸುಂದರವಾದ ಹೆಣ್ಣು ಮಕ್ಕಳಿಗೆ ಅಂಗಾಂಗಳನ್ನ ಕಿತ್ತು ತಿನ್ನುತ್ತವೆ ಎಂದು ಭವಿಷ್ಯ ನುಡಿದಿರುವ ಕೋಡಿಮಠ ಶ್ರೀ ರಾಜಕೀಯ ವಿಪ್ಲವವಾಗಿ, ಗುಂಪುಗಳಾಗುತ್ತವೆ. ಬೆಂಕಿ, ಗಾಳಿ, ಗುಡುಗು ಸಿಡಿಲಿನಿಂದ ವಿಪರೀತ ಅನಾಹುತಗಳಾಗುತ್ತವೆ. ಭಾರತದಲ್ಲಿ ಇಲ್ಲಿಯವರೆಗೂ ಕಂಡೂ ಕೇಳರಿಯದಂತ ಬಹುದೊಡ್ಡ ಆಘಾತ ಆಗುತ್ತದೆ. ಜಗತ್ತಿನ ಸಾಮ್ರಾಟರುಗಳು ತಲ್ಲಣಗೊಳ್ಳುತ್ತಾರೆ. ಸಾವು ನೋವುಗಳು ಹೆಚ್ಚಾಗುತ್ತವೆ ಎಂದು ಕೋಡಿಮಠ ಶ್ರೀ ಆಘಾತಕಾರಿ ಭವಿಷ್ಯ ಹೇಳಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button