Breaking NewsLatestಮನರಂಜನೆಸಿನಿಮಾಸೆಲೆಬ್ರಿಟಿಸ್ಯಾಂಡಲ್ ವುಡ್

ಕೂದಲು ದಾನ ಮಾಡಿದ ನಟಿ ಸಂಜನಾ ಗಲ್ರಾನಿ: ಫೋಟೋ ನೋಡಿ ಅಭಿಮಾನಿಗಳು ಶಾಕ್!

ಸೆಲೆಬ್ರಿಟಿಗಳು ತಮ್ಮ ಸೌಂದರ್ಯದ ಬಗ್ಗೆ ಅತಿ ಹೆಚ್ಚಿನ ಕಾಳಜಿ ವಹಿಸ್ತಾರೆ. ಮಾರ್ಕೆಟ್ ನಲ್ಲಿ ಸಿಗೋ ದುಬಾರಿ ಕಾಸ್ಮೆಟಿಕ್ಸ್ ಗಳನ್ನ ಬಳಸಿ ಸೌಂದರ್ಯವನ್ನ ಹೆಚ್ಚಿಸಿಕೊಳ್ತಾರೆ. ಕೊಂಚ ಕೂದಲು ಉದುರಿದ್ರು ಡಾಕ್ಟರ್ ಬಳಿ ಓಡಿ ಹೋಗ್ತಾರೆ. ಇದಕ್ಕೆ ನಟಿ ಸಂಜನಾ ಗಲ್ರಾನಿ ಕೂಡ ಹೊರತಾಗಿಲ್ಲ. ಸಾಕಷ್ಟು ಬ್ಯೂಟಿ ಕಾನ್ಶಿಯಸ್ ಹೊಂದಿದ್ದ ಸಂಜನಾ ಸೋಷಿಯಲ್ ಮೀಡಿಯಾ ಖಾತೆಗಳನ್ನ ಓಪನ್ ಮಾಡಿದ್ರೆ ಶಾಕ್ ಆಗೋದು ಗ್ಯಾರಂಟಿ. ನಟಿ ಸಂಜನಾ ಗಲ್ರಾನಿ ತಮ್ಮ ಕೂದಲನ್ನ ದಾನ ಮಾಡಿದ್ದು ಅದರ ಫೋಟೋವನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಸಿನಿಮಾಗಳ ಹೊರತಾಗಿಯೂ ನಟಿ ಸಂಜನಾ ಪರ್ಸನಲ್ ಲೈಫ್ ನಲ್ಲೂ ಸಾಕಷ್ಟು ಏಳು ಬೀಳುಗಳನ್ನ ಕಂಡಿದ್ದಾರೆ. ಆದ್ರೆ ಅದ್ಯಾವುದಕ್ಕೂ ಸಂಜನಾ ತಲೆ ಕೆಡಿಸಿಕೊಳ್ಳದೆ ತಮ್ಮ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು. ಸದ್ಯ ಸಂಜನಾ ಗಲ್ರಾನಿ ಜೀವನದಲ್ಲಿ ನೋವುಗಳು ಮರೆಯಾಗಿ ಖುಷಿಯ ದಿನಗಳು ಆರಂಭವಾಗಿದೆ. ಇದೀಗ ಸಂಜನಾ ಎಂಟು ತಿಂಗಳ ಗರ್ಭಿಣಿ. ಇನ್ನು ಒಂದು ತಿಂಗಳಲ್ಲಿ ಸಂಜನಾ ಮಡಿಲಿಗೆ ಮುದ್ದು ಮಗುವಿನ ಆಗಮನವಾಗಲಿದೆ. ಈ ಹಿನ್ನೆಲೆಯಲ್ಲಿ ನಟಿ ತಮ್ಮ ಕೂದಲನ್ನ ದಾನ ಮಾಡಿ ಧನ್ಯವಾದ ಹೇಳಿದ್ದಾರೆ.

‘ಸೌಂದರ್ಯ ನೋಡುವವರ ದೃಷ್ಟಿಯಲ್ಲಿದೆ. ದೇವರಲ್ಲಿ ಇಟ್ಟ ನಂಬಿಕೆಯನ್ನು ಪೂರ್ಣಮಾಡಲು ನನ್ನ ಕೂದಲನ್ನು ದಾನ ಮಾಡಿದ್ದೇನೆ. ಸಾಕಷ್ಟು ಅಡೆತಡೆಗಳನ್ನು ಎದುರಿಸಿದ ನಂತರದಲ್ಲಿ ಜೀವನವು ಮತ್ತೆ ಸುಂದರವಾಗುತ್ತಿದೆ. ಇದಕ್ಕಾಗಿ ನಾನು ದೇವರಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು. ಜೈ ಶ್ರೀ ಕೃಷ್ಣ, ಅಹಂ ಬ್ರಹ್ಮಾಸ್ಮಿ’ ಎಂದಿದ್ದಾರೆ.

ಸಂಜನಾರ ಫೋಟೋ ನೋಡಿದ ಅಭಿಮಾನಿಳು ಅಚ್ಚರಿ ವ್ಯಕ್ತಪಡಿಸಿದ್ದು ಸಜ್ಜನ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಜೊತೆಗೆ ಹುಟ್ಟಲಿರುವ ಮಗುವಿಗೆ ಶುಭ ಹಾರೈಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button