ಆಸ್ಕರ್ ಅಕಾಡಮಿಗೆ ನಟ ವಿಲ್ ಸ್ಮಿತ್ ರಾಜೀನಾಮೆ!

ಲಾಸ್ ಏಂಜಲೀಸ್: ಮಾಡಿದ ತಪ್ಪಿನ ಪರಿಣಾಮವಾಗಿ ಪಶ್ಚತ್ತಾಪ ಪಟ್ಟುಕೊಂಡು ನಾನು ಆಸ್ಕರ್ ಅಕಾಡಮಿ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ವಿಲ್ ಸ್ಮಿತ್ ಹೇಳಿದ್ದಾರೆ. ಈ ವರ್ಷದ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಿರೂಪಕ ಕ್ರಿಸ್ ರಾಕ್ ತನ್ನ ಪತ್ನಿ ಬಗ್ಗೆ ಕಾಮಿಡಿಯಾಗಿ ಮಾತಾಡಿದ್ರು ಅನ್ನೋ ಕಾರಣಕ್ಕೆ ಕೋಪಗೊಂಡ ವಿಲ್ ಸ್ಮಿತ್ ವೇದಿಕೆಯ ಮೇಲೆ ಕಪಾಳ ಮೋಕ್ಷ ಮಾಡಿದ್ದರು. ಈ ಬಗ್ಗೆ ಕ್ಷಮೆ ಕೇಳಿರುವ ವಿಲ್ ಸ್ಮಿತ್ ಆ ಘಟನೆ ಆಘಾತಕಾರಿ ಮತ್ತು ಕ್ಷಮಿಸಲಾರದ ಸಂಗತಿ ಎಂದಿದ್ದಾರೆ.

ನಾನು ಅಕಾಡೆಮಿಯ ನಂಬಿಕೆಗೆ ದ್ರೋಹ ಎಸಗಿದ್ದೇನೆ. ಇತರ ನಾಮನಿರ್ದೇಶಿತರು ಮತ್ತು ವಿಜೇತರ ಸಂತೋಷದ ಕ್ಷಣಗಳನ್ನು ಆಚರಿಸುವ ಅವಕಾಶವನ್ನು ನಾನು ಕಿತ್ತುಕೊಂಡಿದ್ದೇನೆ. ನನ್ನ ಹೃದಯ ಛಿದ್ರವಾಗಿದೆ. ಆದ್ದರಿಂದ, ನಾನು ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್ ನ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಮತ್ತು ಮಂಡಳಿಯ ಯಾವುದೇ ಮುಂದಿನ ಪರಿಣಾಮಗಳನ್ನು ಸ್ವೀಕರಿಸುತ್ತೇನೆ’ ಎಂದು ವಿಲ್ ಸ್ಮಿತ್ ಹೇಳಿದ್ದಾರೆ.
ಇನ್ನು ಮುಂದೆ ಅಕಾಡಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್ ಅಕಾಡಮಿಗೂ ವಿಲ್ ಸ್ಮಿತ್ ಗೂ ಯಾವುದೇ ಸಂಬಂಧ ಮುಂದುವರಿಯುವಂತಿಲ್ಲ. ಹೆಸರಾಂತ ನಟ ಒಂದು ಕ್ಷಣ ಕೋಪದ ಕೈಗೆ ಬುದ್ದಿಕೊಟ್ಟಿದ್ದರ ಫಲವಾಗಿ ಇಡೀ ವಿಶ್ವದ ಅಭಿಮಾನಿಗಳ ಮುಂದೆ ತಲೆತಗ್ಗಿಸುವಂತಾಗಿದ್ದು ನಿಜಕ್ಕೂ ದುರಂತ
